ಜಮ್ಮು-ಕಾಶ್ಮೀರದ ಇನ್ನೂ ಮೂರು ಜಿಲ್ಲೆಗಳಲ್ಲಿ ಡ್ರೋನ್‌ ಬಳಕೆ ನಿಷೇಧ

ಜಮ್ಮು ಮತ್ತು ಕಾಶ್ಮೀರದ ಸಾಂಬಾ, ರಾಂಬನ್ ಮತ್ತು ಬಾರಾಮುಲ್ಲಾದಲ್ಲಿ ಡ್ರೋನ್‌ಗಳು ಮತ್ತು ಇತರ ಮಾನವರಹಿತ ವೈಮಾನಿಕ ವಾಹನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ ಇಟ್ಟುಕೊಳ್ಳುವುದನ್ನು ಜಿಲ್ಲಾ ಅಧಿಕಾರಿಗಳು ನಿಷೇಧಿಸಿದ್ದಾರೆ.
ಡ್ರೋಣ್
ಡ್ರೋಣ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ, ರಾಂಬನ್ ಮತ್ತು ಬಾರಾಮುಲ್ಲಾದಲ್ಲಿ ಡ್ರೋನ್‌ಗಳು ಮತ್ತು ಇತರ ಮಾನವರಹಿತ ವೈಮಾನಿಕ ವಾಹನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ ಇಟ್ಟುಕೊಳ್ಳುವುದನ್ನು ಜಿಲ್ಲಾ ಅಧಿಕಾರಿಗಳು ನಿಷೇಧಿಸಿದ್ದಾರೆ.

ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ಶಸ್ತ್ರಸಜ್ಜಿತ ಡ್ರೋನ್‌ಗಳೊಂದಿಗೆ ಭಯೋತ್ಪಾದಕ ದಾಳಿಯ ನಂತರ ಶ್ರೀನಗರ ಮತ್ತು ಗಡಿ ಜಿಲ್ಲೆಗಳಾದ ರಾಜೌರಿ ಮತ್ತು ಕಥುವಾದಲ್ಲಿನ ಅಧಿಕಾರಿಗಳು ಇಂತಹ ನಿಷೇಧವನ್ನು ವಿಧಿಸಿದ್ದರು.

ಬಾರಾಮುಲ್ಲಾದಲ್ಲಿ ಡ್ರೋನ್ ಕ್ಯಾಮೆರಾಗಳು ಅಥವಾ ಇತರ ರೀತಿಯ ಮಾನವರಹಿತ ವೈಮಾನಿಕ ವಾಹನಗಳನ್ನು ಹೊಂದಿರುವವರನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಲು ನಿರ್ದೇಶಿಸಲಾಗಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಕೂಟಗಳಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಸಣ್ಣ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ರಾಷ್ಟ್ರ ವಿರೋಧಿ ಅಂಶಗಳಿಂದ ಅದರ ಬಳಕೆಯ ಅಪಾಯದ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಆದೇಶಿಸಲಾಗಿದೆ ಎಂದು ರಾಂಬಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮುಸರತ್ ಇಸ್ಲಾಂ ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕರು ಡ್ರೋನ್‌ಗಳನ್ನು ನಿಯೋಜಿಸಿದ ಮೊದಲ ಉದಾಹರಣೆಯಾಗಿ ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ಡ್ರೋಣ್ ಮೂಲಕ ಎರಡು ಬಾಂಬ್‌ಗಳನ್ನು ಸ್ಫೋಟಿಸಲಾಯಿತು. ದಾಳಿಯಲ್ಲಿ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಸ್ಫೋಟಗಳು ಬೆಳಿಗ್ಗೆ 1.40 ರ ಸುಮಾರಿಗೆ ಪರಸ್ಪರ ಆರು ನಿಮಿಷಗಳಲ್ಲಿ ನಡೆದಿತ್ತು. 

ಮೊದಲ ಸ್ಫೋಟವು ಜಮ್ಮುವಿನ ಹೊರವಲಯದಲ್ಲಿರುವ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಒಂದೇ ಅಂತಸ್ತಿನ ಕಟ್ಟಡದ ಛಾವಣಿ ಮೇಲೆ ಬಿದ್ದು ಕಟ್ಟಡ ಹಾನಿಕೊಂಡಿತ್ತು. ಇನ್ನು ಎರಡನೆಯದು ನೆಲದ ಮೇಲೆ ಬಿದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com