"ಬಾತ್ರಾ ಪರ್ವತ ತುದಿ"ಗೆ ತೆರಳಿ ಕ್ಯಾಪ್ಟನ್ ವಿಕ್ರಮ್ ಬಾತ್ರಾಗೆ ಗೌರವಾರ್ಪಣೆ ಮಾಡಿದ ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ!

ಕಾರ್ಗಿಲ್ ಯುದ್ಧದಲ್ಲಿ ಶೌರ್ಯ ಮೆರೆದಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಬಲಿದಾನ ದಿನದಂದು ಅವರನ್ನು ಸ್ಮರಿಸಲು ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ ಸುಖೋಯ್-30 ಎಂಕೆಐ ನಲ್ಲಿ ಬಾತ್ರಾ ಪರ್ವತ ತುದಿಗೆ ತೆರಳಿ ಗೌರವಾರ್ಪಣೆ ಮಾಡಿದ್ದಾರೆ. 
ಕ್ಯಾಪ್ಟನ್ ವಿಕ್ರಮ್ ಬಾತ್ರಾ
ಕ್ಯಾಪ್ಟನ್ ವಿಕ್ರಮ್ ಬಾತ್ರಾ

ಜಮ್ಮು: ಕಾರ್ಗಿಲ್ ಯುದ್ಧದಲ್ಲಿ ಶೌರ್ಯ ಮೆರೆದಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಬಲಿದಾನ ದಿನದಂದು ಅವರನ್ನು ಸ್ಮರಿಸಲು ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ ಸುಖೋಯ್-30 ಎಂಕೆಐ ನಲ್ಲಿ ಬಾತ್ರಾ ಪರ್ವತ ತುದಿಗೆ ತೆರಳಿ ಗೌರವಾರ್ಪಣೆ ಮಾಡಿದ್ದಾರೆ. 

ಸೇನಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, "ನಾರ್ತನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ ಜೋಷಿ ಜು.11 ರಂದು ಬಾತ್ರ ಹಿಲ್ ಟಾಪ್ ಗೆ ತೆರಳಿ ಗೌರವ ಸಲ್ಲಿಸಿದ್ದಾರೆ" ಎಂದು ಹೇಳಿದ್ದಾರೆ.

1999 ರ ಜುಲೈ 7 ರಂದು ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರ "ಎ ದಿಲ್ ಮಾಂಗೆ ಮೋರ್" ಎಂಬ ಗೆಲುವಿನ ಘೋಷದೊಂದಿಗೆ ಕಾರ್ಗಿಲ್ ನ ಪಾಯಿಂಟ್ 5140 ನ್ನು ಗೆದ್ದಿದ್ದರು, ನಂತರ 4875 ಪಾಯಿಂಟ್ ನ್ನು ಗೆದ್ದು ಬಲಿದಾನಗೈದಿದ್ದರು. 

ಕೊನೆಯದಾಗಿ ಬಾತ್ರ ಅವರು ಗೆದ್ದಿದ್ದ 4875 ಪಾಯಿಂಟ್ ಗೆ ಬಾತ್ರಾ ಹಿಲ್ ಟಾಪ್ ಎಂದು ನಾಮಕರಣ ಮಾಡಲಾಗಿದೆ. ಎಲ್ಒಸಿಯಾದ್ಯಂತ ಇರುವ ಮೌಂಟೇನ್ ಟಾಪ್ ಇದಾಗಿದೆ. 

"ಬಾತ್ರ ಅವರ ಬಲಿದಾನ ದಿವಸವನ್ನು ಆಚರಣೆ ಮಾಡಲು ಅಂದಿನ ಕಮಾಂಡಿಂಗ್ ಅಧಿಕಾರಿ ಹಾಗೂ ಈಗಿನ ಜಿಒಸಿ-ಇನ್-ಸಿ ನಾರ್ತನ್ ಕಮಾಂಡ್, ಲೆಫ್ಟಿನೆಂಟ್ ಜನರಲ್ ವೈ.ಕೆ ಜೋಷಿ ಬಾತ್ರಾ ಹಿಲ್ ಟಾಪ್ ಗೆ ತೆರಳಿದ್ದರು ಈ ನಡೆ ಕಮಾಂಡಿಂಗ್ ಅಧಿಕಾರಿ ಹಾಗೂ ಅವರ ಅಧಿಕಾರಿಯ ನಡುವಿನ ಶ್ವಾಶ್ವತ ಸಂಬಂಧವನ್ನು ತಿಳಿಸುತ್ತದೆ" ಎಂದು ಲೆಫ್ಟಿನೆಂಟ್ ಕರ್ನಲ್ ಅಭಿನವ್ ನವನೀತ್ ಮಾಹಿತಿ ನೀಡಿದ್ದಾರೆ. 

ಲೆಫ್ಟಿನೆಂಟ್ ಜನರಲ್ ಜೋಷಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದು ವೀರ ಚಕ್ರವನ್ನು ನೀಡಿ ಅವರನ್ನು ಗೌರವಿಸಲಾಗಿದೆ. 

"ಕ್ಯಾಬ್ಟನ್ ಬಾತ್ರಾ ಯುವ ಅಧಿಕಾರಿಗಳನ್ನು ಇಂದಿಗೂ ಉತ್ತೇಜಿಸುತ್ತಿದ್ದು, ಅವರ ಹೋರಾಟ ಶಾಶ್ವತವಾಗಿ ಯುವಬ್ ಅಧಿಕಾರಿಗಳನ್ನು ಇನ್ನಷ್ಟು ಉತ್ತೇಜಿಸುವಂಥದ್ದಾಗಿದೆ" ಎಂದು ಸೇನೆ ತಿಳಿಸಿದೆ. ಕಾರ್ಗಿಲ್ ಯುದ್ಧದ ವೇಳೆ ಕ್ಯಾಪ್ಟನ್ ಬಾತ್ರ JAKRIF ರೆಜಿಮೆಂಟ್ ನ  13 ನೇ ಬೆಟಾಲಿಯನ್ ನ ಸಿಬ್ಬಂದಿಗಳನ್ನು ಮುನ್ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com