ವೆಬ್ ಸೈಟ್ ನಲ್ಲಿ 'ಮುಸ್ಲಿಂ ಮಹಿಳೆಯರ ಹರಾಜು' ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಎನ್ ಸಿಡಬ್ಲ್ಯೂಪತ್ರ!

ಕಾರ್ಯನಿರ್ವಹಿಸದ ವೆಬ್ ಸೈಟ್ ವೊಂದು ಅಕ್ರಮವಾಗಿ ಅನೇಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ, ಅವರನ್ನು ಹರಾಜಿಗೆ ಹಾಕಿರುವ ಕುರಿತು ತನಿಖೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಎನ್ ಸಿಡಬ್ಲ್ಯೂ ಹೇಳಿದೆ.
ಎನ್ ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ
ಎನ್ ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ

ನವದೆಹಲಿ: ಕಾರ್ಯನಿರ್ವಹಿಸದ ವೆಬ್ ಸೈಟ್ ವೊಂದು ಅಕ್ರಮವಾಗಿ ಅನೇಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ ಲೋಡ್ ಮಾಡಿ, ಅವರನ್ನು ಹರಾಜಿಗೆ ಹಾಕಿರುವ ಕುರಿತು ತನಿಖೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಎನ್ ಸಿಡಬ್ಲ್ಯೂ ಹೇಳಿದೆ.

10 ದಿನಗಳೊಳಗೆ ವಿವರವಾದ ಕ್ರಮ ತೆಗೆದುಕೊಂಡ ವರದಿಯನ್ನು ಸಲ್ಲಿಸುವಂತೆ ಆಯೋಗ ಕೇಳಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ. ಅವಹೇಳನಾಕಾರಿ ಹೇಳಿಕೆಯೊಂದಿಗೆ ಅನೇಕ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹಾಕಿದ್ದ ವೆಬ್ ಸೈಟ್ ತನಿಖೆಗಾಗಿ ಮಧ್ಯ ಪ್ರವೇಶಿಸುವಂತೆ ದೆಹಲಿ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ  ರೇಖಾ ಶರ್ಮಾ ಮನವಿ ಮಾಡಿದ್ದಾರೆ. 

'ಗಿತುಬ್' ಎಂಬ ಇಂಟರ್ನೆಟ್ ಪ್ಲಾಟ್ ಫಾರಂನಲ್ಲಿ 'ಸುಲ್ಲಿ ಡೀಲ್ಸ್' ಎಂದು ಕರೆಯಲಾಗುವ ವೆಬ್ ಸೈಟ್ ನಲ್ಲಿ  ಪತ್ರಕರ್ತರು, ಹೋರಾಟಗಾರರು, ವಿಶ್ಲೇಷಕರು, ಕಲಾವಿದರು, ಸಂಶೋಧಕರು  ಸೇರಿದಂತೆ ಅನೇಕ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವಹೇಳನಾಕಾರಿ ಹೇಳಿಕೆಯೊಂದಿಗೆ ಅಪ್ ಮಾಡಿ, ಅವರನ್ನು ಹರಾಜಿಗೆ ಹಾಕಿರುವ ಬಗ್ಗೆ ಮಾಧ್ಯಮ ವರದಿಯೊಂದರಲ್ಲಿ ಉಲ್ಲೇಖಿಸಿರುವುದರ ಬಗ್ಗೆ  ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದಾಗಿ ಎನ್ ಸಿಡಬ್ಲ್ಯೂ ಹೇಳಿಕೆಯಲ್ಲಿ ತಿಳಿಸಿದೆ. 

ಈ ಅಪರಾಧದ ಸಂಚುಕೋರರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲು ಮತ್ತು ಈ ವಿಚಾರದ ಬಗ್ಗೆ ತನಿಖೆ ನಡೆಸಲು ಮಧ್ಯ ಪ್ರವೇಶಿಸಬೇಕೆಂದು ದೆಹಲಿ ಪೊಲೀಸ್ ಆಯುಕ್ತರಿಗೆ ರೇಖಾ ಶರ್ಮಾ ಪತ್ರ ಬರೆದಿದ್ದಾರೆ. 10 ದಿನಗಳೊಳಗೆ ಕ್ರಮ ತೆಗೆದುಕೊಂಡ ಬಗ್ಗೆ ವಿವರವಾದ ವರದಿಯೊಂದನ್ನು ಸಲ್ಲಿಸುವಂತೆ ಆಯೋಗ ಕೇಳಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com