ರಾಮ್ಕಿ ಗ್ರೂಪ್ ಪ್ರಾಪರ್ಟಿ ಮೇಲೆ ಐಟಿ ದಾಳಿ; 1,200 ಕೋಟಿ ರೂಪಾಯಿ ಕೃತಕ ನಷ್ಟ ಬಯಲು!

ಆದಾಯ ತೆರಿಗೆ ಇಲಾಖೆ ವೈಎಸ್ ಆರ್ ಪಿ ರಾಜ್ಯಸಭೆ ಸಂಸದ ಅಲ್ಲಾ ಅಯೋಧ್ಯ ರಾಮಿರೆಡ್ಡಿ ಹಾಗೂ ಅವರ ಕುಟುಂಬ ಒಡೆತನದ ರಾಮ್ಕಿ ಗ್ರೂಪ್ ಮೇಲೆ ದಾಳಿ ನಡೆಸಿದ್ದು, ಅಂದಾಜು 1,200 ಕೋಟಿ ರೂಪಾಯಿ ಕೃತಕ ನಷ್ಟವನ್ನು ಬಯಲು ಮಾಡಿದೆ. 
ಐಟಿ ದಾಳಿ
ಐಟಿ ದಾಳಿ

ಹೈದಾರಾಬಾದ್: ಆದಾಯ ತೆರಿಗೆ ಇಲಾಖೆ ವೈಎಸ್ ಆರ್ ಪಿ ರಾಜ್ಯಸಭೆ ಸಂಸದ ಅಲ್ಲಾ ಅಯೋಧ್ಯ ರಾಮಿರೆಡ್ಡಿ ಹಾಗೂ ಅವರ ಕುಟುಂಬ ಒಡೆತನದ ರಾಮ್ಕಿ ಗ್ರೂಪ್ ಮೇಲೆ ದಾಳಿ ನಡೆಸಿದ್ದು, ಅಂದಾಜು 1,200 ಕೋಟಿ ರೂಪಾಯಿ ಕೃತಕ ನಷ್ಟವನ್ನು ಬಯಲು ಮಾಡಿದೆ. 

288 ಕೋಟಿ ರೂಪಾಯಿ ಮೊತ್ತಕ್ಕೆ ತಪ್ಪಾದ ಸಾಲವನ್ನು ಸಂಸ್ಥೆ ತೋರಿಸಿತ್ತು. "ಸಂಸ್ಥೆ ಹಾಗೂ ಅದರ ಸಹವರ್ತಿಗಳು ರೂಪಾಯಿ 300 ಕೋಟಿ ರೂಪಾಯಿ ಲೆಕ್ಕವಿಲ್ಲದ ಆದಾಯವನ್ನು ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ, ಅಷ್ಟೇ ಅಲ್ಲದೇ ತೆರಿಗೆ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ" ಎಂದು ಐಟಿ ಇಲಾಖೆ ಹೇಳಿದೆ. 

ರಾಮ್ಕಿ ಗ್ರೂಪ್ ನಲ್ಲಿ ತೀವ್ರ ನಷ್ಟ ಉಂಟಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು ಎಂದು ಐಟಿ ಹೇಳಿದೆ. ನಷ್ಟಕ್ಕೆ ಸಂಬಂಧಿಸಿದ ತಪ್ಪಾದ, ಕೃತಕ ದಾಖಲೆಗಳನ್ನು ಐಟಿ ವಶಪಡಿಸಿಕೊಂಡಿದೆ. "ಸಹ ಸಂಸ್ಥೆಗಳಿಂದ ಲೆಕ್ಕವಿಲ್ಲದ ವಹಿವಾಟುಗಳೂ ದಾಳಿಯಲ್ಲಿ ಪತ್ತೆಯಾಗಿದ್ದು ತನಿಖೆ ಮಾಡಲಾಗುತ್ತಿದೆ ಎಂದು ಐಟಿ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com