ಭರ್ಜರಿ ಕಾರ್ಯಾಚರಣೆ: 2,500 ಕೋಟಿ ಮೌಲ್ಯದ 350 ಕೆಜಿ ಹೆರಾಯಿನ್ ಜಪ್ತಿ: ನಾಲ್ವರ ಬಂಧನ

ದೆಹಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 2,500 ಕೋಟಿ ಮೌಲ್ಯದ 350 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ. ಅಂತೆಯೇ ದಾಳಿ ವೇಳೆ 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಹೆರಾಯಿನ್ ವಶ
ಹೆರಾಯಿನ್ ವಶ

ನವದೆಹಲಿ: ದೆಹಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 2,500 ಕೋಟಿ ಮೌಲ್ಯದ 350 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ. ಅಂತೆಯೇ ದಾಳಿ ವೇಳೆ 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ ಪೊಲೀಸರ ವಿಶೇಷ ತಂಡ ಅಂತರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಪತ್ತೆ ಮಾಡಿದ್ದು, ಬರೋಬ್ಬರಿ 2,500 ಕೋಟಿ ರೂಪಾಯಿ ಮೌಲ್ಯದ 354 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹರ್ಯಾಣದ ಮೂವರು ಹಾಗೂ ದೆಹಲಿ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರನ್ನು  ಬಂಧಿಸಿದ್ದಾರೆ. 

ದಾಖಲೆಯ ಜಾಲ
ಇನ್ನು ದೆಹಲಿ ಪೊಲೀಸ್ ವಿಶೇಷ ತಂಡ ಈವರೆಗೆ ಪತ್ತೆ ಹಚ್ಚಿದ ಅತೀ ದೊಡ್ಡ ಡ್ರಗ್ಸ್ ಜಾಲ ಇದಾಗಿದ್ದು, ಈ ಮೂಲಕ ಭಾರೀ ದೊಡ್ಡ ಪ್ರಮಾಣದ ಡ್ರಗ್ ಜಾಲ ಬಹಿರಂಗೊಂಡತಾಗಿದೆ. ನಾರ್ಕೊ ಭಯೋತ್ಪಾದನೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಶಂಕಿತರ ವಿಚಾರಣೆ ನಡೆಯುತ್ತಿದೆ. ಸ್ಪೆಷಲ್  ಸೆಲ್ ನ ನೀರಜ್ ಠಾಕೂರ್ ಸುದ್ದಿಗಾರರ ಜತೆ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಈ ಬಗ್ಗೆ ಕಾರ್ಯಾಚರಣೆ ನಡೆಯುತ್ತಿತ್ತು. ಈ ಮಾದಕ ದ್ರವ್ಯ ಅಫ್ಘಾನಿಸ್ತಾನದಿಂದ ಬಂದಿರುವುದಾಗಿ ವರದಿ ಹೇಳಿದೆ. ಇದನ್ನು ಕಳ್ಳಸಾಗಾಣೆ ಮೂಲಕ ಮುಂಬಯಿ ಮತ್ತು ದೆಹಲಿಗೆ ಸಾಗಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ಬಂಧಿತ ಆರೋಪಿಗಳನ್ನು ದೆಹಲಿಯ ಘಿತೋರ್ನಿ ನಿವಾಸಿ ರಿಜ್ವಾನ್ ಕಾಶ್ಮೀರಿ (ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಮೂಲದವನು), ಗುರ್‌ಪ್ರೀತ್ ಸಿಂಗ್ ಮತ್ತು ಗುರ್ಜೋತ್ ಸಿಂಗ್, ಇಬ್ಬರೂ ಪಂಜಾಬ್‌ನ ಜಲಂಧರ್ ನಿವಾಸಿಗಳಾಗಿದ್ದು, ಅಫ್ಘಾನಿಸ್ತಾನದ ಕಂದಹಾರ್ ಮೂಲದ ಹಜರತ್ ಅಲಿ ಎಂದು  ಗುರುತಿಸಲಾಗಿದೆ.

ದೆಹಲಿ ಮತ್ತು ಅದರೆ ನೆರೆ ಹೊರೆ ರಾಜ್ಯಗಳಾದ ಪಂಜಾಬ್, ಮಧ್ಯಪ್ರದೇಶ ಮತ್ತು ಹರಿಯಾಣಗಳಲ್ಲಿ ರಿಜ್ವಾನ್ ಕಾಶ್ಮೀರಿ ಮಾದಕ ದ್ರವ್ಯ ಜಾಲದಲ್ಲಿ ತೊಡಗಿದ್ದ. ಸೋಮವಾರ, ದಕ್ಷಿಣ ದೆಹಲಿಯ ಘಿತೋರ್ನಿ ಪ್ರದೇಶದಲ್ಲಿ ರಿಜ್ವಾನ್ ಕಾಶ್ಮೀರಿ ಒಂದು ಕಿಲೋಗ್ರಾಂ ಹೆರಾಯಿನ್ ಸರಬರಾಜು ಮಾಡಲು ಹೊರಟಿದ್ದ. ಈ  ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿಯನ್ನು ಬಂಧಿಸಲಾಗಿತ್ತು. ಈ ವೇಳೆ ಆತನನ್ನು ವಿಚಾರಣೆಗೊಳಪಡಿಸಿದ್ದಾಗ ಆತ ಇತ್ತೀಚೆಗೆ ಭಾರತವನ್ನು ತೊರೆದು ಅಫ್ಘಾನಿಸ್ತಾನಕ್ಕೆ ಹೋದ ಇಶಾ ಖಾನ್ ಎಂಬ ಅಫ್ಘಾನ್ ಪ್ರಜೆಯಡಿಯಲ್ಲಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಪೊಲೀಸರಿಗೆ  ಮಾಹಿತಿ ನೀಡಿದ್ದ. ಅಂತೆಯೇ ಹರ್ಯಾಣದ ಫರಿದಾಬಾದ್‌ನಲ್ಲಿ ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ಗುರ್‌ಪ್ರೀತ್ ಮತ್ತು ಗುರ್ಜೋತ್ ಅವರ ಮಾಹಿತಿ ಕಲೆಹಾಕಿದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ. 

ಮನೆಗಳಲ್ಲಿ ಹೆರಾಯಿನ್ ಅಡಗಿಸಿಟ್ಟಿದ್ದ ದುಷ್ಕರ್ಮಿಗಳು
ಇವರಿಬ್ಬರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಎರಡು ಕಾರುಗಳಿಂದ 166 ಕೆಜಿ ಮತ್ತು 115 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ನಂತರ, ಎರಡೂ ಆರೋಪಿಗಳ ಬಾಡಿಗೆ ಮನೆಯಲ್ಲಿ ಅಡಗಿಸಿಡಲಾಗಿದ್ದ 70 ಕೆಜಿ ಹೆರಾಯಿನ್ ಸಹ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹೆರಾಯಿನ್  ತಯಾರಿಕೆಯಲ್ಲಿ ಬಳಸುವ ಸುಮಾರು 100 ಕೆಜಿ ವಿವಿಧ ರಾಸಾಯನಿಕಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಪೋರ್ಚುಗಲ್ ಮೂಲದ ನವಪ್ರೀತ್ ಸಿಂಗ್ ಎಂಬ ವ್ಯಕ್ತಿಯ ಸೂಚನೆಯ ಮೇರೆಗೆ ಅವರು ಡ್ರಗ್ ರಾಕೆಟ್ ನಡೆಸುತ್ತಿದ್ದೆವು ಎಂದು ಗುರ್ಪ್ರೀತ್ ಮತ್ತು ಗುರ್ಜೋತ್ ಪೊಲೀಸರಿಗೆ ಬಹಿರಂಗಪಡಿಸಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com