ಜೆಡಿಯು ಮಹತ್ವದ ವಿಭಜನೆಯತ್ತ ಸಾಗಿದೆ, ಬಿಹಾರದಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆ: ಚಿರಾಗ್ ಪಾಸ್ವಾನ್
ಪ್ರಸ್ತುತ ಬಿಹಾರದಾದ್ಯಂತ ಆಶೀರ್ವಾದ್ ಯಾತ್ರೆ ನಡೆಸುತ್ತಿರುವ ಜಮುಯಿ ಎಲ್ ಜಿಪಿ ಸಂಸದ ಚಿರಾಗ್ ಪಾಸ್ವಾನ್, ಶುಕ್ರವಾರ ಜೆಡಿಯುನಲ್ಲಿ ದೊಡ್ಡ ವಿಘಟನೆ ಯಾಗಲಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಪತನವಾಗಿ ರಾಜ್ಯದಲ್ಲಿ ಮಧ್ಯಕಾಲೀನ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Published: 10th July 2021 03:11 PM | Last Updated: 10th July 2021 04:04 PM | A+A A-

ಚಿರಾಗ್ ಪಾಸ್ವಾನ್
ಪಾಟ್ನಾ: ಪ್ರಸ್ತುತ ಬಿಹಾರದಾದ್ಯಂತ ಆಶೀರ್ವಾದ್ ಯಾತ್ರೆ ನಡೆಸುತ್ತಿರುವ ಜಮುಯಿ ಎಲ್ ಜಿಪಿ ಸಂಸದ ಚಿರಾಗ್ ಪಾಸ್ವಾನ್, ಶುಕ್ರವಾರ ಜೆಡಿಯುನಲ್ಲಿ ದೊಡ್ಡ ವಿಭಜನೆಯಾಗಲಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಪತನವಾಗಿ ರಾಜ್ಯದಲ್ಲಿ ಮಧ್ಯಕಾಲೀನ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ( ಈಗಿನ ಕೇಂದ್ರ ಆಹಾರ ಸಂಸ್ಕರಣಾ ಸಚಿವ) ಸೇರಿದಂತೆ 5 ಸಂಸದರು ಬಂಡಾಯದ ನಂತರ ಚಿರಾಗ್ ಪಾಸ್ವಾನ್ ಜುಲೈ 5ರಿಂದ ರಂದು ಹಾಜಿಪುರದಿಂದ 'ಆಶೀರ್ವಾದ್ ಯಾತ್ರೆ' ನಡೆಸುತ್ತಿದ್ದಾರೆ.
ಶುಕ್ರವಾರ ಬೆಗುಸರೈನಲ್ಲಿ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಚಿರಾಗ್ ಪಾಸ್ವಾನ್, ಜೆಡಿಯುನಲ್ಲಿ ಆಗಲಿರುವ ದೊಡ್ಡ ವಿಘಟನೆ ಬಿಹಾರದಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆಗೆ ಹಾದಿಯಾಗಲಿದೆ ಎಂದು ಹೇಳಿದರು. ಪಶುಪತಿ ಕುಮಾರ್ ಪರಾಸ್ ಹಾಗೂ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಹಾರದಲ್ಲಿ ಭ್ರಷ್ಟಚಾರ ತುಂಬಿ ತುಳುಕಾಡುತ್ತಿದೆ. ರಾಜ್ಯದಲ್ಲಿ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಆಡಳಿತ ಪಕ್ಷಗಳ ಜನರು ಸಹ ಸರ್ಕಾರವನ್ನು ಭ್ರಷ್ಟ ಎಂದು ಆರೋಪಿಸುತ್ತಿದ್ದಾರೆ. ಮುಂದಿನ ಕೆಲವೇ ತಿಂಗಳುಗಳಲ್ಲಿ, ಆಡಳಿತಾರೂಡ ಜೆಡಿಯನಲ್ಲಿ ದೊಡ್ಡ ವಿಘಟನೆಯಾಗಲಿದ್ದು, ರಾಜ್ಯವನ್ನು ಮಧ್ಯಕಾಲೀನ ಚುನಾವಣೆಗೆ ತಳ್ಳಲಿದೆ ಎಂದು ಭವಿಷ್ಯ ನುಡಿದರು.
ಚಿಕ್ಕಪ್ಪ ಪಶುಪತಿ ಪರಾಸ್ ಬಂಡಾಯ ಮತ್ತು ಕೇಂದ್ರ ಸಂಪುಟದಲ್ಲಿ ಸ್ಥಾನ ಕುರಿತಂತೆ ಪ್ರತಿಕ್ರಿಯಿಸಿದ ಚಿರಾಗ್, ರಾಜಕೀಯದಲ್ಲಿ ಎಲ್ಲಾ ಸಾಧ್ಯತೆಗಳು ಮುಕ್ತವಾಗಿರುತ್ತವೆ ಮತ್ತು ಸಂದರ್ಭಗಳನ್ನು ಅವಲಂಬಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು, ಮಹಾಮೈತ್ರಿ ಸೇರಲಿದ್ದಾರೆ ಎಂಬ ವದಂತಿಗಳನ್ನು ಹರಡದಂತೆ ಮಾಧ್ಯಮಗಳಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ, ಸಾರ್ವಜನಿಕರು ನನ್ನ ಚಿಕ್ಕಪ್ಪನನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಶೀಘ್ರದಲ್ಲೇ ಅವರ ಪಿತೂರಿ ಬಹಿರಂಗವಾಗಲಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದರು.