ಪರಿಸರ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸಿ ಮತ್ತು ಯೋಜನೆಗೆ ಅನುಮೋದನೆ ಪಡೆಯಿರಿ!

ಪರಿಸರ ಕಾನೂನುಗಳನ್ನು ಉಲ್ಲಂಘಿಸುವವರಿಗೆ ದಂಡ ಪಾವತಿ ಯೋಜನೆಯಲ್ಲಿ ಕೇಂದ್ರ ಪರಿಸರ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ತಂದಿದೆ, ಉಲ್ಲಂಘನೆಗಳಿಗೆ ದಂಡ ವಿಧಿಸುವಿಕೆ ನಂತರ ವಾಸ್ತವಿಕ ಅನುಮೋದನೆಗ ನೀಡಲಿದೆ.
ಭೂಪೇಂದರ್ ಯಾದವ್
ಭೂಪೇಂದರ್ ಯಾದವ್

ನವದೆಹಲಿ: ಪರಿಸರ ಕಾನೂನುಗಳನ್ನು ಉಲ್ಲಂಘಿಸುವವರಿಗೆ ದಂಡ ಪಾವತಿ ಯೋಜನೆಯಲ್ಲಿ ಕೇಂದ್ರ ಪರಿಸರ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ತಂದಿದೆ, ಉಲ್ಲಂಘನೆಗಳಿಗೆ ದಂಡ ವಿಧಿಸುವಿಕೆ ನಂತರ ವಾಸ್ತವಿಕ ಅನುಮೋದನೆಗ ನೀಡಲಿದೆ. ಈ ನಿರ್ದೇಶನಗಳೊಂದಿಗೆ ಸಚಿವಾಲಯವು ಪರಿಸರ ಉಲ್ಲಂಘನೆಯನ್ನು ಕ್ರಮಬದ್ಧಗೊಳಿಸುವಿಕೆಯನ್ನು ಸಾಂಸ್ಥೀಕರಣಗೊಳಿಸಿದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಪರಿಣಾಮದ ಮೌಲ್ಯಮಾಪನ ಅಧಿಸೂಚನೆ, 2006 (Environment Impact Assessment Notification, 2006) ಅಡಿಯಲ್ಲಿ ಉಲ್ಲಂಘನೆ ಪ್ರಕರಣಗಳನ್ನು ಗುರುತಿಸಲು ಮತ್ತು ನಿರ್ವಹಿಸಲು ಎಸ್ ಒಪಿಗಳು ಎರಡು ವಿಭಾಗಗಳ ಅಡಿಯಲ್ಲಿ ದಂಡದ ನಿಬಂಧನೆಗಳನ್ನು ನೀಡುತ್ತವೆ - ಹೊಸ ಯೋಜನೆಗಳು ಮತ್ತು ವಿಸ್ತರಣಾ ಯೋಜನೆಗಳು, ಸಚಿವಾಲಯದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದೆ ಕೆಲಸ ಪ್ರಾರಂಭವಾದ ಅಥವಾ ಮುಂದುವರಿಸಿದ ಯೋಜನೆಗಳು. ಜುಲೈ 7 ರಂದು ಹೊರಡಿಸಲಾದ ನಿರ್ದೇಶನವು, ಕಾರ್ಯಾಚರಣೆಗಳು ಪ್ರಾರಂಭವಾಗದ ಯೋಜನೆಗಳಿಗೆ, ಯೋಜನಾ ಪ್ರತಿಪಾದಕರಿಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕದವರೆಗಿನ ಯೋಜನೆಯ ಒಟ್ಟು ವೆಚ್ಚದ ಶೇಕಡಾ 1 ರಷ್ಟು ದಂಡ ವಿಧಿಸಲಾಗುತ್ತದೆ ಎಂದು ತೋರಿಸುತ್ತದೆ. ಇಐಎ ವರದಿ ಮತ್ತು ಒಟ್ಟು ಯೋಜನೆಯ ವೆಚ್ಚದ 1 ಶೇಕಡಾ, ಜೊತೆಗೆ ಉಲ್ಲಂಘನೆಯ ಅವಧಿಯಲ್ಲಿ ಒಟ್ಟು ವಹಿವಾಟಿನ ಶೇಕಡಾ 0.25. ಆಗಿರಲಿದೆ.

ಪೂರ್ವಾನುಮತಿ ಇಲ್ಲದೆ ಕೆಲಸ ಪ್ರಾರಂಭವಾದ ಯೋಜನೆಗಳ ವಿಸ್ತರಣೆಗೆ ಇದೇ ರೀತಿಯ ದಂಡ ವಿಧಿಸಲಾಗಿದೆ.

ಸಿಪಿಆರ್-ನಮತಿ ಪರಿಸರ ನ್ಯಾಯ ಕಾರ್ಯಕ್ರಮದ ಹಿರಿಯ ಸಂಶೋಧಕ ಕಾಂಚಿ ಕೊಹ್ಲಿ, ಸಾರ್ವಜನಿಕ ಅಭಿಪ್ರಾಯಗಳಿಗಾಗಿ ಇಐಎ 2020 ಕರಡನ್ನು ಪರಿಚಯಿಸಿದಾಗ ಇದನ್ನು ತೀವ್ರವಾಗಿ ವಿರೋಧಿಸಲಾಗಿತ್ತು. ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವಾಗ ಈ ಬಗ್ಗೆ ಅಂತಿಮ ತೀರ್ಮಾನವಿನ್ನೂ ಬಾಕಿ ಇದೆ. "ಸುಪ್ರೀಂ ಕೋರ್ಟ್ ನ ತೀರ್ಪಿನಿಂದ ಪೋಸ್ಟ್ ಫ್ಯಾಕ್ಟೋ ಅನುಮೋದನೆಗಳ ಅಂತಹ ಅನುದಾನವನ್ನು ಕಾನೂನುಬಾಹಿರವೆಂದು ನಿರ್ಧರಿಸಲಾಗಿದೆ. ಹಾಗಾಗಿಯೂ, ಕಚೇರಿ ಜ್ಞಾಪಕ ಪತ್ರವು ಪರಿಸರ ಅನುಮತಿಗಳನ್ನು ಅನುಸರಿಸದಿರುವುದು ದಂಡವನ್ನು ಪಾವತಿಸುವವರೆಗೆ ಮತ್ತು ನಂತರದ ಅನುಮೋದನೆಗಳನ್ನು ಮಾತುಕತೆ ನಡೆಸುವವರೆಗೂ ತಡೆಯುವ ಅಗತ್ಯವಿಲ್ಲ ಎಂದು ಸೂಚಿಸಿದೆ” ಎಂದು ಅವರು ಹೇಳಿದರು.

ಜಂಟಿ ಕಾರ್ಯದರ್ಶಿ (ಉಲ್ಲಂಘನೆ ಮೌಲ್ಯಮಾಪನ) ಸುಜಿತ್ ಕುಮಾರ್ ಬಾಜಪೇಯಿ ಅವರ ಪ್ರಕಾರ, ಉಲ್ಲಂಘನೆಗಳಿಂದ ಉಂಟಾಗುವ ಪರಿಸರ ಹಾನಿಯನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಅಂತಹ ಉಲ್ಲಂಘಕರನ್ನು ತಕ್ಷಣ ಗುರುತಿಸಿ ಅವರನ್ನು ನಿಯಂತ್ರಕ ಆಡಳಿತಕ್ಕೆ ತರಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com