ಕೊರೋನಾ ಕಾರಣ ಈ ಬಾರಿಯೂ ರಥಯಾತ್ರೆ ಇಲ್ಲ, ಮನೆಯಲ್ಲೇ ಕುಳಿತು ಜಗನ್ನಾಥನ ಪ್ರಾರ್ಥಿಸಿ: ಜಾರ್ಖಂಡ್ ಸಿಎಂ 

ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಈ ವರ್ಷವೂ ಪುರಿ ಜಗನ್ನಾಥ ರಥಯಾತ್ರೆ ನಡೆಸಲು ಸಾಧ್ಯವಾಗುತ್ತಿಲ್ಲ. ಜನರು ಮನೆಗಳಲ್ಲಿಯೇ ಕುಳಿತು ಜಗನ್ನಾಥನ ಪೂಜಿಸಲಿ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸೋಮವಾರ ಹೇಳಿದ್ದಾರೆ. 
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್

ರಾಂಚಿ: ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಈ ವರ್ಷವೂ ಪುರಿ ಜಗನ್ನಾಥ ರಥಯಾತ್ರೆ ನಡೆಸಲು ಸಾಧ್ಯವಾಗುತ್ತಿಲ್ಲ. ಜನರು ಮನೆಗಳಲ್ಲಿಯೇ ಕುಳಿತು ಜಗನ್ನಾಥನ ಪೂಜಿಸಲಿ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, ಈಗಲೂ ರಾಜ್ಯದಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಎರಡನೇ ವರ್ಷ ಕೂಡ ಪುರಿ ಜಗನ್ನಾಥನ ರಥ ಯಾತ್ರೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಬಹಳ ನೋವಾಗುತ್ತಿದೆ. ಆದರೆ, ನಮ್ಮ ಮುಂಬರುವ ದಿನದ ರಕ್ಷಣೆಗಾಗಿ ನಾವು ಈ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸುರಕ್ಷಿತವಾಗಿ ಜನರು ಮನೆಗಳಿಂದಲೇ ಜಗನ್ನಾಥನನ್ನು ಪೂಜಿಸಲಿ ಎಂದು ತಿಳಿಸಿದ್ದಾರೆ. 

ಜಾರ್ಖಂಡ್ ರಾಜ್ಯದಲ್ಲಿ 423 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೂ 3,46,279 ಮಂದಿ ಸೋಂಕಿಗೊಳಗಾಗಿದ್ದಾರೆ. ಅಲ್ಲದೆ, 5,119 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ 3,40,737 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com