ಜನಸಂಖ್ಯಾ ನಿಯಂತ್ರಣ ಧರ್ಮದ ವಿಷಯವಲ್ಲ: ಮುಖ್ತಾರ್ ಅಬ್ಬಾಸ್ ನಖ್ವಿ

ಜನಸಂಖ್ಯಾ ನಿಯಂತ್ರಣ ಯಾವುದೇ ಕೋಮಿನ ವಿಷಯವಲ್ಲ, ಇದನ್ನು ನಿರ್ದಿಷ್ಟ ಧರ್ಮದೊಂದಿಗೆ ಸಂಯೋಜಿಸಲು ಹೊರಟಿರುವ ಜನರು ಮಾನಸಿಕವಾಗಿ ಕೋಮುವಾದಿ ಮನಸ್ಥಿತಿಯವರಾಗಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ

ರಾಮ್‍ಪುರ್: ಜನಸಂಖ್ಯಾ ನಿಯಂತ್ರಣ ಯಾವುದೇ ಕೋಮಿನ ವಿಷಯವಲ್ಲ, ಇದನ್ನು ನಿರ್ದಿಷ್ಟ ಧರ್ಮದೊಂದಿಗೆ ಸಂಯೋಜಿಸಲು ಹೊರಟಿರುವ ಜನರು ಮಾನಸಿಕವಾಗಿ ಕೋಮುವಾದಿ ಮನಸ್ಥಿತಿಯವರಾಗಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಆಂದೋಲನ ಆರಂಭದ ಹಿನ್ನೆಲೆಯಲ್ಲಿ ರಾಮ್‍ ಪುರದಲ್ಲಿ ನಡೆದ ಎರಡು ದಿನಗಳ ನೂತನ ಚುನಾಯಿತ ಪಂಚಾಯತ್‍ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿರುವ ಜನಸಂಖ್ಯಾ ನಿಯಂತ್ರಣೆ ಕುರಿತು ಮಾತನಾಡಿದ ನಖ್ವಿ, ತಮ್ಮನ್ನು ಚುನಾಯಿಸಿದ ಜನರು ಮತ್ತು ತಮ್ಮ ಮೇಲೆ ವಿಶ್ವಾಸವಿಟ್ಟ ಜನರ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ  ತಾರತಮ್ಯವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡುತ್ತಿವೆ. ಗ್ರಾಮಸ್ಥರು, ಬಡವರು ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿಗೆ ಅಗತ್ಯ ನಿಧಿಗಳನ್ನು ಒದಗಿಸುತ್ತಿವೆ ಎಂದು ನಖ್ವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com