ಯೋಗಿಯ ಜನಸಂಖ್ಯಾ ನಿಯಂತ್ರಣ ನೀತಿಯಿಂದ 'ಹಿಂದೂಗಳಿಗೆ ಹಾನಿ': ವಿಹೆಚ್ ಪಿ
ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರನ್ನು ಸರ್ಕಾರದ ಯೋಜನೆಯಿಂದ ಹೊರಗಿಟ್ಟು ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗ ಬಿಡುಗಡೆ ಮಾಡಿದ ಜನಸಂಖ್ಯೆ ನಿಯಂತ್ರಣದ ಕರಡು ಪ್ರಸ್ತಾವನೆಗೆ ವಿಶ್ವ ಹಿಂದೂ ಪರಿಷತ್ ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
Published: 13th July 2021 01:06 PM | Last Updated: 13th July 2021 01:15 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರನ್ನು ಸರ್ಕಾರದ ಯೋಜನೆಯಿಂದ ಹೊರಗಿಟ್ಟು ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗ ಬಿಡುಗಡೆ ಮಾಡಿದ ಜನಸಂಖ್ಯೆ ನಿಯಂತ್ರಣದ ಕರಡು ಪ್ರಸ್ತಾವನೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ರಾಜ್ಯ ಕಾನೂನು ಆಯೋಗಕ್ಕೆ ಪತ್ರ ಬರೆದಿರುವ ವಿಹೆಚ್ ಪಿ, ಜನಸಂಖ್ಯಾ ನೀತಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕುಟುಂಬ ಯೋಜನೆ ಮತ್ತು ವಿವಾದಗಳಿಗೆ ಸಂಬಂಧಿಸಿದ ಪ್ರೋತ್ಸಾಹಕಗಳು ಅಥವಾ ಅಪ್ರೋತ್ಸಾಹಕಗಳಿಗೆ ವಿವಿಧ ಸಮುದಾಯಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿರುವುದರಿಂದ ನೂತನ ಜನಸಂಖ್ಯಾ ನೀತಿಯು ಸಮುದಾಯದಲ್ಲಿ ಅಸಮತೋಲನವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಿದೆ.
ಜನಸಂಖ್ಯೆಯ ಸಂಕೋಚನವನ್ನು ತಪ್ಪಿಸಲು ಮತ್ತು ಒಂದು-ಮಗುವಿನ ನೀತಿಯ ಅನಪೇಕ್ಷಿತ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ತಪ್ಪಿಸಲು 5, 6 (2) ಮತ್ತು 7 ವಿಭಾಗಗಳನ್ನು ಅಳಿಸಲು ವಿಹೆಚ್ ಪಿ ಸೂಚಿಸಿದೆ. ಕೇವಲ ಒಂದು ಸಮುದಾಯ ಮಾತ್ರ ಲಾಭವನ್ನು ಪಡೆದುಕೊಳ್ಳುವ ಪರಿಸ್ಥಿತಿಗೆ ಬರದಂತೆ ಸ್ವತಃ ವಕೀಲರಾಗಿರುವ ವಿಹೆಚ್ ಪಿಯ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಉತ್ತರ ಪ್ರದೇಶಕ್ಕೆ ಸಲಹೆ ನೀಡಿದ್ದಾರೆ. ಇತರ ಸಮುದಾಯಗಳು ಹೆಚ್ಚಾಗುತ್ತಿರುವಾಗ ಹಿಂದೂ ಜನಸಂಖ್ಯೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಜನಸಂಖ್ಯಾ ನೀತಿಯು ಕೆಲಸ ಮಾಡುವ ಮತ್ತು ಅವಲಂಬಿತ ಜನಸಂಖ್ಯಾ ಅನುಪಾತದ ನಡುವಿನ ಸಮತೋಲನಕ್ಕೆ ಅಡ್ಡಿಯಾಗಲಿದೆ ಎಂದು ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರು ಹೇಳಿದ್ದಾರೆ.
ರಾಜ್ಯ ಕಾನೂನು ಆಯೋಗವು ಜನಸಂಖ್ಯೆ ನಿಯಂತ್ರಣ ಮತ್ತು ಕಲ್ಯಾಣಕ್ಕಾಗಿ ಪ್ರಸ್ತಾವನೆಯನ್ನು ನೀಡಿದೆ. ಎರಡು ಮಕ್ಕಳ ನೀತಿಯನ್ನು ಅನುಸರಿಸುವ ಯಾವುದೇ ದಂಪತಿಗಳಿಗೆ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುವುದು ಎಂದು ನಾವು ಪ್ರಸ್ತಾಪಿಸಿದ್ದೇವೆ. ಅಂತವರು ಎಲ್ಲಾ ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಉತ್ತರ ಪ್ರದೇಶ ಕಾನೂನು ಆಯೋಗದ ಅಧ್ಯಕ್ಷ ಅದಿತ್ಯನಾಥ್ ಮಿತ್ತಲ್ ಶನಿವಾರ ಹೇಳಿಕೆ ನೀಡಿದ್ದರು.