ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ಕ್ಕೆ ಆರಂಭ: ಸರ್ವಪಕ್ಷ ಸಭೆ ಕರೆದಿರುವ ಸರ್ಕಾರ
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19 ರಿಂದ ಆಗಸ್ಟ್ 13ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅದರ ಮುನ್ನಾದಿನ ಜುಲೈ 18ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸರ್ವಪಕ್ಷ ಸಭೆ ಕರೆದಿದ್ದಾರೆ. ಅದೇ ದಿನ ಸರ್ಕಾರದಿಂದಲೂ ಸರ್ವಪಕ್ಷ ಸಭೆ ಕರೆಯಲಾಗಿದೆ.
Published: 14th July 2021 12:42 PM | Last Updated: 14th July 2021 01:25 PM | A+A A-

ಪ್ರಹ್ಲಾದ್ ಜೋಶಿ
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19 ರಿಂದ ಆಗಸ್ಟ್ 13ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅದರ ಮುನ್ನಾದಿನ ಜುಲೈ 18ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸರ್ವಪಕ್ಷ ಸಭೆ ಕರೆದಿದ್ದಾರೆ. ಅದೇ ದಿನ ಸರ್ಕಾರದಿಂದಲೂ ಸರ್ವಪಕ್ಷ ಸಭೆ ಕರೆಯಲಾಗಿದೆ.
ಕಲಾಪ ಸುಗಮವಾಗಿ ಸಾಗಲು ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಸೌಹಾರ್ದತೆ ಮೂಡಲು ಕಲಾಪಕ್ಕೆ ಮುನ್ನ ಸರ್ವಪಕ್ಷ ಕರೆಯುವುದು ವಾಡಿಕೆಯಾಗಿರುತ್ತದೆ. ಅದರಂತೆ ಸರ್ಕಾರ ಸರ್ವ ಪಕ್ಷ ಸಭೆಯನ್ನು ಕರೆದಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ರಾಜಕೀಯ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಸಭೆಯಲ್ಲಿ ಹಾಜರಿರುತ್ತಾರೆ.
ಈ ಬಾರಿಯ ಕಲಾಪದಲ್ಲಿ ಹಲವು ಮಸೂದೆಗಳು ಮಂಡನೆಯಾಗಲಿದೆ.