ಸ್ವತಂತ್ರ ಬಂದ ದಶಕಗಳ ಬಳಿಕ ಜಮ್ಮು-ಕಾಶ್ಮೀರದ ಕಡೋಲಾ ಗ್ರಾಮಕ್ಕೆ ವಿದ್ಯುತ್ ಸಂಪರ್ಕ

ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಡಿ ವಿದ್ಯುತ್ ಈಗ ರಾಂಬನ್ ಜಿಲ್ಲೆಯ ಕುಗ್ರಾಮವಾದ ಕಡೋಲಾವನ್ನು ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಂಬನ್: ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಡಿ ವಿದ್ಯುತ್ ಈಗ ರಾಂಬನ್ ಜಿಲ್ಲೆಯ ಕುಗ್ರಾಮವಾದ ಕಡೋಲಾವನ್ನು ತಲುಪಿದೆ.

ರಾಂಬನ್ ಬಸ್ ನಿಲ್ದಾಣದಿಂದ 12 ಕಿ.ಮೀ ದೂರದಲ್ಲಿರುವ ಕಡೋಲಾ, ಲಡಾಧರ್ ಪರ್ವತ ಶ್ರೇಣಿಯ ಬೆಟ್ಟದ ತುದಿಯಲ್ಲಿದೆ. ಈ ಬಗ್ಗೆ ಮಾತನಾಡಿರುವ ರಾಂಬನ್‌ನ ಜಮ್ಮು ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಶನ್ ಲಿಮಿಟೆಡ್(ಜೆಪಿಡಿಸಿಎಲ್)ನ ಕಾರ್ಯನಿರ್ವಾಹಕ ಎಂಜಿನಿಯರ್ ನಿಸ್ಸಾರ್ ಹುಸೇನ್, ಕಡೋಲಾದ ಎಲ್ಲಾ 25 ಮನೆಗಳ ವಿದ್ಯುದ್ದೀಕರಣ ಈ ವರ್ಷ ಜುಲೈ 7ರಂದು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. 

25 ಕೆವಿ ಟ್ರಾನ್ಸ್‌ಫಾರ್ಮರ್‌ನ ಹೊರತಾಗಿ 3 ಕಿ.ಮೀ ದೂರದವರೆಗೆ 69 ಕಂಬಗಳ ಎಚ್ ಟಿ ಲೈನ್ ಮತ್ತು 2.8 ಕಿ.ಮೀ ದೂರದವರೆಗೆ 50 ಕಂಬಗಳ ಎಲ್ ಟಿ ಲೈನ್ ಬಳಸಲಾಗಿದೆ. ಶೋಭಾಗ್ಯ ಯೋಜನೆಯಡಿ 28.64 ಲಕ್ಷ ರೂ. ವ್ಯಹಿಸಲಾಗಿದೆ. 

ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಕಡೋಲಾ ನಿವಾಸಿಗಳು ಗ್ರಾಮದ ವಿದ್ಯುದ್ದೀಕರಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನಮಗೆ ಮೊದಲ ಬಾರಿಗೆ ವಿದ್ಯುತ್ ಸಿಕ್ಕಿದೆ. ಸುಮಾರು 25 ಮನೆಗಳಿಗೆ ವಿದ್ಯುತ್ ಸಿಕ್ಕಿದೆ. ನಮ್ಮ ಮಕ್ಕಳಿಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಮೊಬೈಲ್ ಚಾರ್ಜ್ ಮಾಡಲು ಸಹ ನಾವು ರಾಂಬನ್ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದೆವು. ಈಗ ನಾವು ಟಿವಿಗಳನ್ನು ಖರೀದಿಸಲು ಯೋಜಿಸಿದ್ದೇವೆ. ಆ ಮೂಲಕ ಜಗತ್ತಿನ ಆಗುಹೋಗುಗಳು ತಿಳಿಯುತ್ತದೆ ಎಂದು ಮೊಹಮ್ಮದ್ ಇಕ್ಬಾಲ್ ಹೇಳಿದರು.

ಇನ್ನೊಬ್ಬ ಗ್ರಾಮಸ್ಥ ಶಿವರಾಮ್, ಅಂಗಡಿಯವರು ತಮ್ಮ ಫೋನ್‌ಗಳನ್ನು ಚಾರ್ಜ್ ಮಾಡಲು ಬಿಡದಿರುವ ಸಂದರ್ಭಗಳಿತ್ತು. ಆದರೆ ಈಗ ನಮಗೆ ತುಂಬಾ ಸಂತೋಷವಾಗಿದ್ದೇವೆ ಎಂದು ಹೇಳಿದರು.

"ನಮಗೆ ವಿದ್ಯುತ್ ಒದಗಿಸಿದ್ದಕ್ಕಾಗಿ ನಾವು ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಈ ಮೊದಲು ನಾವು ಬೆಳಕಿಗಾಗಿ ಬುಡ್ಡಿಗಳನ್ನು ಬಳಸುತ್ತಿದ್ದೇವು. ಇದರಿಂದ ಬರುವ ಹೊಗೆಯಿಂದ ನಮ್ಮ ಶ್ವಾಸಕೋಶ ಹಾನಿಯಾಗುತ್ತಿತ್ತು. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಿತು ಎಂದು ಗ್ರಾಮದ ನಿವಾಸಿ ಮೊಹಮ್ಮದ್ ಇರ್ಷಾದ್ ಹೇಳಿದ್ದಾರೆ.

ವಿದ್ಯುದ್ದೀಕರಣದಿಂದ ಸೆಲ್ ಫೋನ್, ಟೆಲಿವಿಷನ್ ಮತ್ತು ಇತರ ಉಪಯುಕ್ತ ವಿದ್ಯುತ್ ಗ್ಯಾಜೆಟ್ಗಳ ಸೌಲಭ್ಯವನ್ನು ಸಹ ಬಳಸುತ್ತೇವೆ. ಅಲ್ಲದೆ ನಮ್ಮ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ಸದ್ದಾಂ ಹುಸೇನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com