ಜಮ್ಮು ಐಎಎಫ್ ಕೇಂದ್ರದ ಬಳಿ ಮತ್ತೆ ಡ್ರೋಣ್ ಹಾರಾಟ ಪತ್ತೆ: ಹೆಚ್ಚಿದ ಭದ್ರತೆ

ಜಮ್ಮುವಿನ ವಾಯುನೆಲೆ ಕೇಂದ್ರದಲ್ಲಿ ಮತ್ತೆ ಡ್ರೋಣ್ ಹಾರಾಟ ಪತ್ತೆಯಾಗಿದ್ದು, ಅಲರ್ಟ್‌ ಆಗಿದ್ದ ಬಿಎಸ್‌ಎಫ್ ಯೋಧರ ಕಣ್ಣಿಗೆ ಡ್ರೋನ್‌ ಬಿದ್ದೊಡನೆ ಗುಂಡು ಹಾರಿಸಿದ್ದಾರೆ. ನಂತರ ಡ್ರೋಣ್ ವಾಪಸಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಜಮ್ಮುವಿನ ವಾಯುನೆಲೆ ಕೇಂದ್ರದಲ್ಲಿ ಮತ್ತೆ ಡ್ರೋಣ್ ಹಾರಾಟ ಪತ್ತೆಯಾಗಿದ್ದು, ಅಲರ್ಟ್‌ ಆಗಿದ್ದ ಬಿಎಸ್‌ಎಫ್ ಯೋಧರ ಕಣ್ಣಿಗೆ ಡ್ರೋನ್‌ ಬಿದ್ದೊಡನೆ ಗುಂಡು ಹಾರಿಸಿದ್ದಾರೆ. ನಂತರ ಡ್ರೋಣ್ ವಾಪಸಾಗಿದೆ ಎಂದು ತಿಳಿದುಬಂದಿದೆ. 

ವಾಯುನೆಲೆ ಕೇಂದ್ರದಲ್ಲಿ ಡ್ರೋಣ್ ಹಾರಾಟ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಡ್ರೋನ್ ದಾಳಿಯ ಅಪಾಯ ಹೆಚ್ಚಾಗಿರುವ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಾಲಗಿದ್ದು, ಕಗ್ಗಲತ್ತಲ ರಾತ್ರಿಯಲ್ಲಿ ಗಡಿ ನುಗ್ಗುವ ಅಪಾಯಕಾರಿ ಡ್ರೋನ್ ಮೇಲೆ ಕಣ್ಣಿಡುವುದಕ್ಕೆ ಕಣ್ಗಾವಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಜಮ್ಮು ಕಾಶ್ಮೀರದ ಪೂಂಚ್ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಂಗಳವಾರ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಪತ್ತೆಯಾಗಿತ್ತು. ತಡರಾತ್ರಿ ಕಾಣಿಸಿಕೊಂಡ ಡ್ರೋನ್ ಮೇಲೆ ಬಿಎಸ್ಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. 

ಭಾರತೀಯ ಭದ್ರತಾ ಸಿಬ್ಬಂದಿ ಡ್ರೋನ್ ವಿರುದ್ಧ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಡ್ರೋನ್ ನಿರ್ವಾಹಕ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆಗ ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂತಿರುಗಿರುವುದನ್ನು ಗಮನಿಸಲಾಗಿತ್ತು ಎಂದು ಹೇಳಲಾಗುತ್ತಿತ್ತು. 

ಕಳೆದ ಜೂನ್ 27ರ ಭಾನುವಾರ ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆಸಲಾಗಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು.

ಅಂದು ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿತ್ತು. ಪರಿಣಾಮ ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿತ್ತು. ಮತ್ತೊಂದು ಸ್ಫೋಟ ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಸಂಭವಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com