ಸರ್ಕಾರದ ಮಾಹಿತಿ ಕೋರಿಕೆಯ ಏಕೈಕ ಅತಿದೊಡ್ಡ ಮೂಲ ಭಾರತ: ಟ್ವಿಟರ್

2020 ರ ದ್ವಿತೀಯಾರ್ಧದಲ್ಲಿ ಸರ್ಕಾರದ ಮಾಹಿತಿ ಕೋರಿಕೆಗಳ ಏಕೈಕ ಅತಿದೊಡ್ಡ ಮೂಲ ಭಾರತವಾಗಿದೆ. ಇದು ಜಾಗತಿಕ ಪ್ರಮಾಣದಲ್ಲಿ ಶೇಕಡಾ 25 ರಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಟ್ವಿಟರ್ ಪಾರದರ್ಶಕತೆ ವರದಿಯಲ್ಲಿ ತಿಳಿಸಲಾಗಿದೆ.  
ಟ್ವಿಟರ್ ಲೋಗೊ
ಟ್ವಿಟರ್ ಲೋಗೊ

ನವದೆಹಲಿ:  2020 ರ ದ್ವಿತೀಯಾರ್ಧದಲ್ಲಿ ಸರ್ಕಾರದ ಮಾಹಿತಿ ಕೋರಿಕೆಗಳ ಏಕೈಕ ಅತಿದೊಡ್ಡ ಮೂಲ ಭಾರತವಾಗಿದೆ. ಇದು ಜಾಗತಿಕ ಪ್ರಮಾಣದಲ್ಲಿ ಶೇಕಡಾ 25 ರಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಟ್ವಿಟರ್ ಪಾರದರ್ಶಕತೆ ವರದಿಯಲ್ಲಿ ತಿಳಿಸಲಾಗಿದೆ. 2020 ರ ಜುಲೈ-ಡಿಸೆಂಬರ್ ಅವಧಿಯಲ್ಲಿ ಭಾರತದ ಕೋರಿಕೆಗಳ ಜಾಗತಿಕ ಪ್ರಮಾಣ ಶೇಕಡಾ 25 ರಷ್ಟಿದ್ದರೆ ಶೇಕಡಾ 15 ರಷ್ಟು ಜಾಗತಿಕ ಖಾತೆಗಳನ್ನು ಒಳಗೊಂಡಿದೆ.

ಈ ಅವಧಿಯಲ್ಲಿ, 131,933 ಖಾತೆಗಳ ನಿರ್ದಿಷ್ಟಪಡಿಸುವ ವಿಷಯವನ್ನು ತೆಗೆದುಹಾಕಲು ಟ್ವಿಟರ್ 38,524 ಕಾನೂನು ಬೇಡಿಕೆಗಳನ್ನು ಸ್ವೀಕರಿಸಿದೆ. ಈ ಜಾಗತಿಕ ಕಾನೂನು ಬೇಡಿಕೆಗಳಲ್ಲಿ ಶೇಕಡಾ 29 ಕ್ಕೆ ಪ್ರತಿಕ್ರಿಯೆಯಾಗಿ ಟ್ವಿಟರ್ ಕೆಲವು ಅಥವಾ ಎಲ್ಲಾ ವರದಿಯಾದ ವಿಷಯವನ್ನು ತಡೆಹಿಡಿದಿದೆ ಅಥವಾ ತೆಗೆದುಹಾಕಿದೆ. 

ಕಳೆದ ವರ್ಷ  ಕೊರೋನಾರೋನವೈರಸ್ ಸಾಂಕ್ರಾಮಿಕ ಸೇರಿದಂತೆ ತೀವ್ರವಾದ ಜಾಗತಿಕ ಸವಾಲುಗಳನ್ನು ಅನುಭವಿಸಿದ್ದೇವೆ. ಸಾಮಾನ್ಯವಾಗಿ ಇಂಟರ್ನೆಟ್ ಪ್ರವೇಶ ಮತ್ತು ಟ್ವಿಟರ್ ಗೆ ನಿರ್ದಿಷ್ಟ ಮಿತಿ ಹೇರಲು ಸರ್ಕಾರ ಮಾಡಿದ್ದ ಪ್ರಯತ್ನಗಳನ್ನು ನಾವು ನೋಡಿದ್ದೇವೆ ಎಂದು ಕಂಪನಿ ಬ್ಲಾಗ್ ವೊಂದರಲ್ಲಿ ಹೇಳಿದೆ. ಜೂನ್-ಡಿಸೆಂಬರ್ ಅವಧಿಗೆ, ಸರ್ಕಾರದ ಮಾಹಿತಿ ಕೋರಿಕೆಗಳ ಅನುಸರಣೆ ದರ ಜಾಗತಿಕವಾಗಿ ಶೇಕಡಾ 30 ರಷ್ಟಿತ್ತು. ಎರಡನೇ ಅತಿ ಹೆಚ್ಚು ಮಾಹಿತಿ ಕೋರಿಕೆಗಳು ಯುನೈಟೆಡ್ ಸ್ಟೇಟ್ಸ್‌ನಿಂದ ಹುಟ್ಟಿಕೊಂಡಿವೆ, ಇದು ಜಾಗತಿಕ ಮಾಹಿತಿ ಕೋರಿಕೆಗಳಲ್ಲಿ ಶೇಕಡಾ 22 ರಷ್ಟಿದೆ.

ಜಾಗತಿಕ ತುರ್ತು ಕೋರಿಕೆಗಳಲ್ಲಿ ಅಮೆರಿಕ (ಶೇ 34) ಹೆಚ್ಚಿನಾಗಿದ್ದು, ಜಪಾನ್ (ಶೇ 17) ದಕ್ಷಿಣ ಕೊರಿಯಾ ಶೇ(16) ಮತ್ತು ಜಪಾನ್, ಇಂಡಿಯಾ, ರಷ್ಯಾ ಟರ್ಕಿ ಮತ್ತು ದಕ್ಷಿಣ ಕೊರಿಯಾದ ಒಟ್ಟಾರೇ ಒಟ್ಟು ಜಾಗತಿಕ ಕಾನೂನು ಬೇಡಿಕೆಗಳ ಶೇಕಡಾ 94 ರಷ್ಟಿದೆ. ವಿಶ್ವದಾದ್ಯಂತ 199 ಮಾನ್ಯತಾ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ಖಾತೆಗಳಿಂದ 361 ಕಾನೂನು ಬೇಡಿಕೆಗಳಿಗೆ ಒಳಪಟ್ಟಿವೆ ಎಂದು ಟ್ವಿಟರ್ ಹೇಳಿದೆ. ಇದು ಜನವರಿ-ಜೂನ್ ಅವಧಿಯಿಂದ ಶೇಕಡಾ 26 ರಷ್ಟು ಹೆಚ್ಚಾಗಿದೆ. ಕಳೆದ ವರ್ಷದಲ್ಲಿನ ವರದಿಗಳಿಗೆ ಹೋಲಿಸಿದರೆ ಒಟ್ಟಾರೇ, ಕಾನೂನು ಬೇಡಿಕೆಗಳ  ಸಂಖ್ಯೆ ಶೇಕಡಾ 9ಕ್ಕೆ ಕುಸಿದಿರುವುದನ್ನು ಕಂಪನಿ ಗಮನಿಸಿದೆ. 

ಇತ್ತೀಚಿಗೆ ಸ್ಥಳೀಯ ಕುಂದುಕೊರತೆ ಅಧಿಕಾರಿಯಾಗಿ ವಿನಯ ಪ್ರಕಾಶ್ ಅವರನ್ನು ಟ್ವಿಟರ್ ನೇಮಿಸಿದೆ. ಹೊಸ ಐಟಿ ನಿಯಮ ಪಾಲನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ, ಟ್ವಿಟರ್ ಜೊತೆಗೆ ಸಂಘರ್ಷಕ್ಕಿಳಿದಿದೆ. ಐಟಿ ನಿಯಮಗಳ ತಿದ್ದುಪಡಿ ಪ್ರಕಾರ, ಸೋಷಿಯಲ್ ಮೀಡಿಯಾ ಮತ್ತು ಸ್ಟ್ರೀಮಿಂಗ್ ಕಂಪೆನಿಗಳು ವಿವಾದಾಸ್ಪದ ವಿಷಯವನ್ನು ತ್ವರಿತವಾಗಿ ತೆಗೆದುಹಾಕಬೇಕು ಮತ್ತು ಅಧಿಕಾರಿಗಳು ಮತ್ತು ನ್ಯಾಯಾಲಯಗಳು ಫ್ಲ್ಯಾಗ್ ಮಾಡಿದ ಆನ್‌ಲೈನ್ ವಿಷಯವನ್ನು ಎದುರಿಸಲು ಮತ್ತು ತನಿಖೆಗೆ ಸಹಾಯ ಮಾಡಲು ದೇಶ ಮೂಲದ ಕುಂದುಕೊರತೆ ಪರಿಹಾರ ಅಧಿಕಾರಿಗಳನ್ನು ನೇಮಿಸುವ ಅಗತ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com