ಜೆಇಇ ಮೇನ್ 4ನೇ ಆವೃತ್ತಿ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

ಜೆಇಇ ಮೇನ್ ನಾಲ್ಕನೇ ಆವೃತ್ತಿ ಪರೀಕ್ಷೆಯನ್ನು ಮುಂದೂಡಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜೆಇಇ ಮೇನ್ ನಾಲ್ಕನೇ ಆವೃತ್ತಿ ಪರೀಕ್ಷೆಯನ್ನು ಮುಂದೂಡಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. 

ಎಂಜಿನಿಯರ್ ಪ್ರವೇಶಕ್ಕಾಗಿ ನಡೆಸುವ ಜೆಇಇ ಮೇನ್ ನಾಲ್ಕನೇ ಎಡಿಷನ್ ಪರೀಕ್ಷೆಯನ್ನು ಆಗಸ್ಟ್ 26ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿದೆ. ಇದರೊಂದಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಒಂದು ತಿಂಗಳ ಹೆಚ್ಚುವರಿ ಸಮಯ ಸಿಗಲಿದೆ.

ಜುಲೈ 27ರಿಂದ ಆಗಸ್ಟ್ 2ರವರೆಗೆ ಪರೀಕ್ಷೆ ನಡೆಸಲು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಕೊರೋನಾ ಕಾರಣಗಳಿಗಾಗಿ ಮತ್ತೆ ಪರೀಕ್ಷೆಯನ್ನು ಮುಂದೂಡಲಾಗಿದೆ. 

ನಾಲ್ಕನೆ ಆವೃತ್ತಿಯ ಜೆಇಇ ಮೇನ್ ಪರೀಕ್ಷೆ ಬರೆಯಲು ಇದಾಗಲೇ 7.32 ಲಕ್ಷ ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com