ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆಗೆ ಎನ್ ಹೆಚ್ ಆರ್ ಸಿ ಶಿಫಾರಸು
ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಕಾನೂನಿನ ನಿಯಮದ ಬದಲಾಗಿ ಆಳುವವರ ನಿಯಮವನ್ನು ಸ್ಪಷ್ಟಪಡಿಸುತ್ತಿದ್ದು, ಸಿಬಿಐ ತನಿಖೆ ನಡೆಯಬೇಕೆಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಸಮಿತಿ ಶಿಫಾರಸು ಮಾಡಿದೆ.
Published: 15th July 2021 06:26 PM | Last Updated: 15th July 2021 07:19 PM | A+A A-

ಎನ್ ಹೆಚ್ ಆರ್ ಸಿ
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಕಾನೂನಿನ ನಿಯಮದ ಬದಲಾಗಿ ಆಳುವವರ ನಿಯಮವನ್ನು ಸ್ಪಷ್ಟಪಡಿಸುತ್ತಿದ್ದು, ಸಿಬಿಐ ತನಿಖೆ ನಡೆಯಬೇಕೆಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಸಮಿತಿ ಶಿಫಾರಸು ಮಾಡಿದೆ.
ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಮಿತಿ ಕೋಲ್ಕತ್ತಾ ಹೈಕೋರ್ಟ್ ಗೆ ತನ್ನ ವರದಿಯನ್ನು ಸಲ್ಲಿಸಿದ್ದು ಹಿಂಸಾಚಾರ ಘಟನೆಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಶಿಫಾರಸ್ಸು ಮಾಡಿದೆ.
ಹೈಕೋರ್ಟ್ ನ ನಿರ್ದೇಶನದ ಪ್ರಕಾರ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಸಮಿತಿಯನ್ನು ರಚಿಸಿದ್ದರು. "ಹತ್ಯೆ, ಅತ್ಯಾಚಾರ ಮುಂತಾದಂತಹ ಹೀನ ಕೃತ್ಯಗಳ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕು, ಅದರ ವಿಚಾರಣೆ ಬಂಗಾಳವನ್ನು ಹೊರತುಪಡಿಸಿ ಬೇರೊಂದು ರಾಜ್ಯದಲ್ಲಿ ನಡೆಸಬೇಕು" ಎಂದು ಜೂ.13 ರಂದು ಕೋರ್ಟ್ ಗೆ ಸಮಿತಿ ಶಿಫಾರಸ್ಸು ಮಾಡಿದೆ.