'ಸಂಭೋಗವಿಲ್ಲದ ಲೈಂಗಿಕ ದೌರ್ಜನ್ಯ ಕೂಡ ಅತ್ಯಾಚಾರವೇ': ಬಾಂಬೇ ಹೈಕೋರ್ಟ್ ಮಹತ್ವದ ತೀರ್ಪು

ಸಂಭೋಗವಿಲ್ಲದ ಲೈಂಗಿಕ ಹಲ್ಲೆ ಕೂಡ ಮುಂಬೈ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಶುಕ್ರವಾರ ಬಾಂಬೇ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಸಂಭೋಗವಿಲ್ಲದ ಲೈಂಗಿಕ ಹಲ್ಲೆ ಕೂಡ ಮುಂಬೈ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಶುಕ್ರವಾರ ಬಾಂಬೇ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

33 ವರ್ಷದ ಅತ್ಯಾಚಾರ ಆರೋಪಿಗೆ ನೀಡಲಾಗಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇವತಿ ಮೋಹಿತೆ ದೆರೆ ಅವರ ಪೀಠ, ಅರ್ಜಿಯನ್ನು ವಜಾಗೊಳಿಸುವ ಮೂಲಕ ಕಳೆದ ತಿಂಗಳು ಅತ್ಯಾಚಾರ ಆರೋಪದಡಿ ವ್ಯಕ್ತಿಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ  10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಎತ್ತಿಹಿಡಿದಿದೆ.

ಇದಕ್ಕೂ ಮೊದಲು ಆರೋಪ ಪರ ವಾದ ಮಂಡಿಸಿದ್ದ ವಕೀಲರು, ಆರೋಪಿತ ಮತ್ತು ಸಂತ್ರಸ್ತೆಯ ನಡುವೆ ಯಾವುದೇ ಶಿಶ್ನ ಸಂಭೋಗ ನಡೆದಿಲ್ಲ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ವಾದಿಸಿದ್ದ ಸಂತ್ರಸ್ಥೆಯ ಪರ ವಕೀಲರು ವಿಧಿವಿಜ್ಞಾನದ ಸಾಕ್ಷ್ಯಗಳ ಮೂಲಕ ಸಂತ್ರಸ್ಥೆಯ ಮೇಲೆ ಲೈಂಗಿಕ ದೌರ್ಜನ್ಯ  ನಡೆದಿರುವುದು ಸಾಬೀತಾಗಿದೆ ಎಂದು ವಾದಿಸಿದ್ದರು.

ಪರ-ವಿರೋಧ ವಾದಗಳನ್ನು ಆಲಿಸಿದ ನ್ಯಾಯಾಲಯ, ಶಿಶ್ನ ಸಂಭೋಗ ನಡೆದಿಲ್ಲ ಎಂದ ಮಾತ್ರಕ್ಕೇ ಇಂತಹ ಪ್ರಕರಣಗಳನ್ನು ಅತ್ಯಾಚಾರ ಅಲ್ಲ ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ. ವಿಧಿವಿಜ್ಞಾನದ ಸಾಕ್ಷ್ಯಗಳು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಾಬೀತುಪಡಿಸಿವೆ. ಮೇಲ್ಮನವಿ ಮತ್ತು ಪ್ರಾಸಿಕ್ಯೂಟ್ರಿಕ್ಸ್ (ಬಲಿಪಶು)  ಬಟ್ಟೆಗಳ ಮೇಲೆ ಕಂಡುಬರುವ ಮಣ್ಣು ಲೈಂಗಿಕ ದೌರ್ಜನ್ಯ ನಡೆದ ಸ್ಥಳದಿಂದ ಸಂಗ್ರಹಿಸಿದ ಭೂಮಿಗೆ ಹೊಂದಿಕೆಯಾಗುತ್ತದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ವರದಿಯಿಂದಲೂ ಇದು ಸ್ಪಷ್ಟವಾಗಿದೆ. ಈ ಸಾಕ್ಷ್ಯವು ಪ್ರಾಸಿಕ್ಯೂಟ್ರಿರ್ಸ್ ವಾದಕ್ಕೆ ವಿಶ್ವಾಸಾರ್ಹತೆಯನ್ನು ನೀಡುತ್ತದೆ ಎಂದು ಕೋರ್ಟ್ ಹೇಳಿತು.

ಅಲ್ಲದೆ ಶಿಶ್ನ-ಯೋನಿ ಸಂಭೋಗವಿಲ್ಲ ಎಂಬುದಕ್ಕೆ ಪುರಾವೆಗಳನ್ನು ಪರಿಗಣಿಸಿ ಅತ್ಯಾಚಾರ ಅಲ್ಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯೋನಿಯೊಳಗೆ ಬೆರಳಿನ ದಾಳಿ ಕೂಡ ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಹೀಗಾಗಿ ಅರ್ಜಿದಾರ ಸಂತ್ರಸ್ಥೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ಸಾಬೀತಾಗಿದೆ ಎಂದು  ಹೈಕೋರ್ಟ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com