ಸಿಎಮ್‌ಎಫ್‌ಆರ್‌ಐ ವಿಜ್ಞಾನಿ ಕಾಜಲ್ ಚಕ್ರವರ್ತಿಗೆ ಪ್ರತಿಷ್ಠಿತ ನಾರ್ಮನ್ ಬೊರ್ಲಾಗ್ ಪ್ರಶಸ್ತಿ!

ಮಧುಮೇಹ ಸೇರಿದಂತೆ ಜೀವನಶೈಲಿ ಕಾಯಿಲೆಗಳ ಚಿಕಿತ್ಸೆಗಾಗಿ ಕಡಲಕಳೆಗಳಿಂದ ನ್ಯೂಟ್ರಾಸ್ಯುಟಿಕಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಗಾಗಿ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್(ಸಿಎಮ್ಎಫ್ಆರ್ಐ) ಪ್ರಧಾನ ವಿಜ್ಞಾನಿ ಕಾಜಲ್ ಚಕ್ರವರ್ತಿಗೆ ರಾಷ್ಟ್ರೀಯ ಮಾನ್ಯತೆಯನ್ನು ತಂದಿದೆ.
ಕಾಜಲ್ ಚಕ್ರವರ್ತಿ
ಕಾಜಲ್ ಚಕ್ರವರ್ತಿ

ಕೊಚ್ಚಿ: ಮಧುಮೇಹ ಸೇರಿದಂತೆ ಜೀವನಶೈಲಿ ಕಾಯಿಲೆಗಳ ಚಿಕಿತ್ಸೆಗಾಗಿ ಕಡಲಕಳೆಗಳಿಂದ ನ್ಯೂಟ್ರಾಸ್ಯುಟಿಕಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಗಾಗಿ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್(ಸಿಎಮ್ಎಫ್ಆರ್ಐ) ಪ್ರಧಾನ ವಿಜ್ಞಾನಿ ಕಾಜಲ್ ಚಕ್ರವರ್ತಿಗೆ ರಾಷ್ಟ್ರೀಯ ಮಾನ್ಯತೆಯನ್ನು ತಂದಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಸ್ಥಾಪಿಸಿದ ಕೃಷಿ ಸಂಶೋಧನೆಯಲ್ಲಿ ಶ್ರೇಷ್ಠತೆಗಾಗಿ ಪ್ರತಿಷ್ಠಿತ ನಾರ್ಮನ್ ಬೊರ್ಲಾಗ್ ಪ್ರಶಸ್ತಿಯನ್ನು ಅವರು ಪಡೆದರು.

ಪ್ರತಿ ಐದು ವರ್ಷಗಳಿಗೊಮ್ಮೆ ಘೋಷಿಸಲಾಗುವ ಈ ಪ್ರಶಸ್ತಿಗೆ 10 ಲಕ್ಷ ರೂ. ನಗದು ಅಲ್ಲದೆ, ಐದು ವರ್ಷಗಳ ಕಾಲ ಸವಾಲಿನ ಸಂಶೋಧನಾ ಯೋಜನೆಯನ್ನು ಕೈಗೊಳ್ಳಲು ವಿಜ್ಞಾನಿಗೆ 1.5 ಕೋಟಿ ರೂ.ಗಳ ಸಂಶೋಧನಾ ಅನುದಾನ ನೀಡಲಾಗುವುದು.

ಸಂಧಿವಾತ ನೋವುಗಳು, ಟೈಪ್ -2 ಡಯಾಬಿಟಿಸ್, ಡಿಸ್ಲಿಪಿಡೆಮಿಯಾ, ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಎದುರಿಸಲು ಆಯ್ದ ಕಡಲಕಳೆಗಳಿಂದ ನ್ಯೂಟ್ರಾಸ್ಯುಟಿಕಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮತ್ತು ವ್ಯಾಪಾರೀಕರಿಸುವಲ್ಲಿ ಚಕ್ರವರ್ತಿಯ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಈ ಸಾಲಿನ ಸಂಶೋಧನೆಯ ಇತ್ತೀಚಿನ ಪ್ರಯತ್ನಗಳಲ್ಲಿ ಆಂಟಿಯೊಸ್ಟಿಯೊಪೊರೋಟಿಕ್ ಮತ್ತು ಇಮ್ಯೂನ್-ಬೂಸ್ಟ್ ನ್ಯೂಟ್ರಾಸ್ಯುಟಿಕಲ್ಸ್ ಸೇರಿವೆ. ಇನ್ನು ಕೊವೀಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಅವರ ಸಂಶೋಧನೆ ಬಹು-ನಿರೋಧಕ ಋಣಾತ್ಮಕ ರೋಗಕಾರಕಗಳ ವಿರುದ್ಧ ಹೋರಾಡಲು ಆಂಟಿಮೈಕ್ರೊಬಿಯಲ್ ಚಿಕಿತ್ಸಕ ಉತ್ಪನ್ನವನ್ನು ಅಭಿವೃದ್ಧಿಪಡಿಸಿತು.

ಐಸಿಎಆರ್ನ 93ನೇ ಪ್ರತಿಷ್ಠಾನ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಎಮ್‌ಎಫ್‌ಆರ್‌ಐ ನಾಲ್ಕು ಐಸಿಎಆರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪಿಎಚ್‌ಡಿ ವಿದ್ವಾಂಸರಾದ ಫಸಿನಾ ಮಕ್ಕರ್ ಅವರು ಕೃಷಿ ಮತ್ತು ಅಲೈಡ್ ಸೈನ್ಸಸ್‌ನಲ್ಲಿ ಅತ್ಯುತ್ತಮ ಡಾಕ್ಟರಲ್ ಪ್ರಬಂಧ ಸಂಶೋಧನೆಗಾಗಿ ಜವಾಹರಲಾಲ್ ನೆಹರು ಪ್ರಶಸ್ತಿಯನ್ನು ಪಡೆದರು.

ಅಧಿಕೃತ ಭಾಷಾ ನೀತಿಯ ಅನುಷ್ಠಾನಕ್ಕಾಗಿ ಸಿಎಮ್‌ಎಫ್‌ಆರ್‌ಐ ರಾಜರ್ಷಿ ಟಂಡನ್ ರಾಜ್‌ಭಾಶಾ ಪ್ರಶಸ್ತಿಯನ್ನೂ ಗೆದ್ದುಕೊಂಡಿತು. ಸಿಎಮ್‌ಎಫ್‌ಆರ್‌ಐ ಈ ಪ್ರಶಸ್ತಿಯನ್ನು 11ನೇ ಬಾರಿಗೆ ಪಡೆಯುತ್ತಿದೆ. ಆಂತರಿಕ ಹಿಂದಿ ನಿಯತಕಾಲಿಕೆ 'ಮತ್ಸ್ಯಗಂಧ' ಗಾಗಿ ಐಸಿಎಆರ್ ಅತ್ಯುತ್ತಮ ಹಿಂದಿ ಮ್ಯಾಗಜೀನ್ ಪ್ರಶಸ್ತಿಯನ್ನೂ ಸಂಸ್ಥೆ ಪಡೆದಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಾಸ್ತವ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com