ಕೋವಿಡ್-19 ರೋಗಿಗಳಿಗೆ ಟಿಬಿ ಪರೀಕ್ಷೆಗೊಳಪಡಲು ಸರ್ಕಾರ ಶಿಫಾರಸ್ಸು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್-19 ರೋಗಿಗಳಿಗೆ ಟಿಬಿ ಪರೀಕ್ಷೆಗೊಳಪಡುವುದಕ್ಕೆ ಶಿಫಾರಸ್ಸು ಮಾಡಿದೆ. 
ಕೋವಿಡ್-19 ಸೋಂಕಿತರಿಗೆ ಪರೀಕ್ಷೆ
ಕೋವಿಡ್-19 ಸೋಂಕಿತರಿಗೆ ಪರೀಕ್ಷೆ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್-19 ರೋಗಿಗಳಿಗೆ ಟಿಬಿ ಪರೀಕ್ಷೆಗೊಳಪಡುವುದಕ್ಕೆ ಶಿಫಾರಸ್ಸು ಮಾಡಿದೆ. ಟಿಬಿ ರೋಗಿಗಳಿಗೂ ಸಹ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 

ಕೇಂದ್ರ ಆರೋಗ್ಯ ಮತ್ತು ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕೋವಿಡ್-19 ರೋಗಿಗಳಲ್ಲಿ ಟಿ.ಬಿ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಪ್ರತಿ ದಿನ 12 ಕ್ಕೂ ಹೆಚ್ಚು ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ವೈದ್ಯರಲ್ಲಿ ಆತಂಕ ಮೂಡಿಸಿದೆ. 

ಟಿಬಿ ಹಾಗೂ ಕೋವಿಡ್-19 ಪ್ರಕರಣಗಳ ಮೇಲೆ ನಿಗಾ ವಹಿಸುವ ಪ್ರಯತ್ನಗಳನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಹೆಚ್ಚು ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಹೊರತಾಗಿ ಹಲವು ಸಲಹೆಗಳನ್ನು ಹಾಗೂ ಮಾರ್ಗದರ್ಶನಗಳನ್ನು ಎಂಹೆಚ್ಎಫ್ ಡಬ್ಲ್ಯು TB-COVID TB-ILI/SARI ಎರಡೂ ಬಗೆಯ ಪತ್ತೆ ಪರೀಕ್ಷೆಗಳನ್ನು ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದೆ. 

2020 ರಲ್ಲಿ ಕೋವಿಡ್-19 ನಿರ್ಬಂಧಗಳಿಂದಾಗಿ ಟಿಬಿ ಪತ್ತೆ ಶೇ.25 ರಷ್ಟು ಕಡಿಮೆಯಾಗಿತ್ತು. ಆದರೆ ಈಗ ಟಿಬಿ ಸಮಸ್ಯೆ ಇರುವವರನ್ನು ಪತ್ತೆ ಮಾಡುವುದಕ್ಕಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com