ಸಂಸತ್ ಮುಂಗಾರು ಅಧಿವೇಶನ ಹಿನ್ನೆಲೆ, ಉಭಯ ಸದನಗಳಲ್ಲಿ ಪಕ್ಷದ ಸದಸ್ಯರ ಗುಂಪನ್ನು ಪುನರ್ ರಚಿಸಿದ ಸೋನಿಯಾ 

ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಕಾರ್ಯಕಲಾಪ ಸುಗಮವಾಗಿ ಸಾಗಲು ಅನುವುವಾಗುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರ ಗುಂಪುನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುನರ್ ರಚಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಕಾರ್ಯಕಲಾಪ ಸುಗಮವಾಗಿ ಸಾಗಲು ಅನುವುವಾಗುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರ ಗುಂಪುನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುನರ್ ರಚಿಸಿದ್ದಾರೆ.

ಲೋಕಸಭೆಯಲ್ಲಿ ಅಧೀರ್ ರಂಜನ್ ಚೌದರಿ ನಾಯಕರಾಗಿದ್ದು, ಗೌರವ್ ಗೊಗೊಯ್ ಉಪನಾಯಕರಾಗಿದ್ದಾರೆ. ಕೆ. ಸುರೇಶ್ - ಮುಖ್ಯ ವಿಪ್ ,ಮನೀಶ್ ತಿವಾರಿ ಡಾ. ಶಶಿ ತರೂರ್, ರಾವ್ನೀತ್ ಸಿಂಗ್ ಬಿಟ್ಟು- ವಿಪ್ ,ಮಾಣಿಕಂ ಟ್ಯಾಗೋರ್- ವಿಪ್ ಆಗಿ ನೇಮಕಗೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ನಾಯಕರಾಗಿದ್ದು, ಆನಂದ್ ಶರ್ಮಾ ಉಪನಾಯಕರಾಗಿದ್ದಾರೆ. ಜೈರಾಮ್ ರಮೇಶ್- ಮುಖ್ಯ ವಿಪ್ ,ಅಂಬಿಕಾ ಸೋನಿ, ಪಿ. ಚಿದಂಬರಂ, ದಿಗ್ವಿಜಯ್ ಸಿಂಗ್  ಕೆ. ಸಿ. ವೇಣುಗೋಪಾಲ್ ಉಳಿದ ಸದಸ್ಯರಾಗಿದ್ದಾರೆ.

ಈ ಗುಂಪುಗಳ ಜಂಟಿ ಸಭೆಗಳನ್ನು ಕರೆಯಬಹುದಾಗಿದೆ ಮತ್ತು ಅಗತ್ಯವಿದ್ದಾಗ ಮಲ್ಲಿಕಾರ್ಜುನ ಖರ್ಗೆ ಜಂಟಿ ಸಭೆಗಳ 
ಕನ್ವೀನರ್ ಆಗಿರುತ್ತಾರೆ  ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com