ಕೇರಳದಲ್ಲಿ ಜಿಕಾ ವೈರಸ್ ಪ್ರಕರಣಗಳ ಸಂಖ್ಯೆ 35ಕ್ಕೆ ಏರಿಕೆ

ಕೇರಳದಲ್ಲಿ ಜಿಕಾ ವೈರಸ್ ನ 5 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಈ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 35ಕ್ಕೆ ಏರಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ."
ಝಿಕಾ ವೈರಾಣು ಹರಡುವ ಸೊಳ್ಳೆ (ಸಂಗ್ರಹ ಚಿತ್ರ)
ಝಿಕಾ ವೈರಾಣು ಹರಡುವ ಸೊಳ್ಳೆ (ಸಂಗ್ರಹ ಚಿತ್ರ)

ತಿರುವನಂತಪುರಂ: ಕೇರಳದಲ್ಲಿ ಜಿಕಾ ವೈರಸ್ ನ 5 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಈ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 35ಕ್ಕೆ ಏರಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ."

35 ಪ್ರಕರಣಗಳ ಪೈಕಿ 24 ಜನರಿಗೆ ಪರೀಕ್ಷೆಯಲ್ಲಿ ನೆಗೆಟೀವ್ ವರದಿಯಾಗಿದೆ. ಉಳಿದವರು ವೈದ್ಯಕೀಯ ಪರಿವೀಕ್ಷಣೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. 
 
ಈ ಮೊದಲು ಮೊದಲ ಬಾರಿಗೆ 24 ವರ್ಷದ ಗರ್ಭಿಣಿಯಲ್ಲಿ ಜಿಕಾ ವೈರಸ್ ಸೋಂಕು ಕಂಡುಬಂದಿತ್ತು. ನಂತರ ಖಾಸಗಿ ಆಸ್ಪತ್ರೆಯಲ್ಲಿ ಆರು ದಿನಗಳಲ್ಲಿ ಮಹಿಳೆ ಚೇತರಿಸಿಕೊಂಡು ಆರೋಗ್ಯವಂತ ಮಗುವಿಗೆ ಜನ್ಮನೀಡಿದ್ದರು. ಕೋವಿಡ್ ಸಾಂಕ್ರಾಮಿಕ ನಡುವೆ ರಾಜ್ಯದಲ್ಲಿ ಇದೀಗ ಜಿಕಾ ವೈರಸ್ ರೋಗ ಆತಂಕವನ್ನುಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com