ಸಂಜಯ್ ಗಾಂಧಿ ರೂಪಿಸಿದ್ದ ಕುಟುಂಬ ಯೋಜನೆ ಕಾರ್ಯಕ್ರಮದಿಂದ ಆಕ್ರೋಶ, ಸೋಲು ಉಂಟಾಯಿತು: ಕಾಂಗ್ರೆಸ್ ಸಂಸದ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಗಾಂಧಿ ಉತ್ತೇಜಿಸಿದ್ದ ಕುಟುಂಬ ಯೋಜನೆಯ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿ, ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಯಿತು
ವಿವೇಕ್ ತನ್ಖಾ
ವಿವೇಕ್ ತನ್ಖಾ

ಇಂದೋರ್: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಗಾಂಧಿ ಉತ್ತೇಜಿಸಿದ್ದ ಕುಟುಂಬ ಯೋಜನೆಯ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿ, ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಯಿತು ಎಂದು ಕಾಂಗ್ರೆಸ್ ನ ನಾಯಕ ಹಾಗೂ ರಾಜ್ಯಸಭಾ ಸದಸ್ಯ ವಿವೇಕ್ ತನ್ಖಾ ಹೇಳಿದ್ದಾರೆ. 

ತಾನ್ಖಾ ಸ್ವತಃ ತಾವು ಕುಟುಂಬ ಯೋಜನೆ ಕಾರ್ಯಕ್ರಮದ ಪರವಾಗಿರುವುದಾಗಿ ಹೇಳಿದ್ದು ಆದರೆ ಅದನ್ನು ರಾಜಕೀಯಗೊಳಿಸಬಾರದು ಎಂದು ತನ್ಖಾ ಅಭಿಪ್ರಾಯಪಟ್ಟಿದ್ದಾರೆ. ವಿವೇಕ್ ತನ್ಖಾ ಉತ್ತರ ಪ್ರದೇಶದ ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ಕಾನೂನು ಬಗ್ಗೆ ಮಾತನಾಡುತ್ತಿದ್ದರು. 

"ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಗಾಂಧಿ ಅವರೂ ಸಹ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಪ್ರಸ್ತಾಪಿಸಿದ್ದರು. ಇದು ಒಳ್ಳೆಯ ಯೋಜನೆ. ಆದರೆ ಸಮಯ ಹಾಗೂ ಅದನ್ನು ಜಾರಿಗೊಳಿಸಲು ಮುಂದಾದ ರೀತಿ ಸರಿ ಇರಲಿಲ್ಲ ಏಕೆಂದರೆ ಜನರನ್ನು ಒತ್ತಾಯಪೂರ್ವಕವಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಒಳಪಡಿಸುವುದಾಗಿತ್ತು, ಇದರಿಂದ ಜನರು ಆಕ್ರೋಶಗೊಂಡಿದ್ದರು ಇದೇ ಕಾಂಗ್ರೆಸ್ ನ ಸೋಲಿಕೆ ಕಾರಣವಾಯಿತು ಎಂದು ಇಂದೋರ್ ನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿರುವ ವಿವೇಕ್ ತನ್ಖಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com