ಪ್ರಾಣ ಪಣಕ್ಕಿಟ್ಟು ಚಿರತೆ ಬಾಯಿಂದ ಐದು ವರ್ಷದ ಮಗಳ ಜೀವ ರಕ್ಷಿಸಿದ 'ಮಹಾ'ತಾಯಿ

ಸಾಹಸಿ ತಾಯಿಯೊಬ್ಬಳು ಚಿರತೆ ದಾಳಿಗೆ ಸಿಲುಕಿದ್ದ ಐದು ವರ್ಷದ ಬಾಲಕಿಯನ್ನು ಆಕೆಯ ತಾಯಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಸಾಹಸಿ ತಾಯಿಯೊಬ್ಬಳು ಚಿರತೆ ದಾಳಿಗೆ ಸಿಲುಕಿದ್ದ ಐದು ವರ್ಷದ ಬಾಲಕಿಯನ್ನು ಆಕೆಯ ತಾಯಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿದ್ದಾರೆ.

ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಕಾಡಿನಲ್ಲಿ ಈ ಘಟನೆ ನಡೆದಿದ್ದು, ಜೂನ್ 30 ರಂದು ನಡೆದ ಘಟನೆಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ನಾಗ್ಪುರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. 

ಮೂಲಗಳ ಪ್ರಕಾರ ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಜುನೊನಾ ಗ್ರಾಮದ ನಿವಾಸಿ ಅರ್ಚನಾ ಮೆಶ್ರಮ್ ಹಳ್ಳಿಯ ಹೊರವಲಯಕ್ಕೆ ಹೋಗುತ್ತಿದ್ದಾಗ ಚಿರತೆ ಅವರನ್ನು ಹಿಂಬಾಲಿಸಿದೆ. ಇದನ್ನು ಗಮನಿಸಿದ ತಾಯಿ ಭಯದಿಂದ ಜೋರಾಗಿ ಓಡಲು ಪ್ರಾರಂಭಿಸಿದ್ದಾರೆ. ಚಿರತೆ ಕೂಡ ವೇಗವಾಗಿ ಅವರನ್ನು  ಹಿಂಬಾಲಿಸಿದ್ದು, ಈ ವೇಳೆ ಮಹಿಳೆ ಬಿದಿರಿನ ಕೋಲಿನಿಂದ ಚಿರತೆಗೆ ಭಾರಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಚಿರತೆ ಮಹಿಳೆಯ ಪಕ್ಕದಲ್ಲಿದ್ದ ಬಾಲಕಿಯ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಮಹಿಳೆ ಚಿರತೆ ಮೇಲೆ ಎರಗಿ ಚಿರತೆಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಸತತವಾಗಿ ಏಟು ಬೀಳುತ್ತಲೇ ಚಿರತೆ ನೋವು  ತಾಳಲಾರದೇ ಬಾಲಕಿಯನ್ನು ಬಿಟ್ಟು ಕಾಡಿನತ್ತ ಕಾಲ್ಕಿತ್ತಿದೆ.

ಕೂಡಲೇ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಹೊತ್ತು ಕೂಗಿಕೊಂಡಿದ್ದಾಳೆ. ಈ ವೇಳೆಗಾಗಲೇ ಅಲ್ಲಿಗೆ ಆಗಮಿಸಿದ್ದ ಅರಣ್ಯ ಸಿಬ್ಬಂದಿ ಆಕೆಯನ್ನು ಚಂದ್ರಾಪುರ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ನಾಗ್ಪುರದ ಸರ್ಕಾರಿ ದಂತ ಆಸ್ಪತ್ರೆಗೆ  ಸ್ಥಳಾಂತರಿಸಲಾಯಿತು ಎಂದು ಫಾರೆಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್‌ನ ವಿಭಾಗೀಯ ವ್ಯವಸ್ಥಾಪಕ ವಿ.ಎಂ.ಮೊರೆ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com