ಹೈಕೋರ್ಟ್
ಹೈಕೋರ್ಟ್

ನಾಗರಿಕ ಸೇವಾ ಮಂಡಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು

ರಾಜ್ಯ ಸರ್ಕಾರ ಕೂಡಲೇ  ನಾಗರಿಕ ಸೇವಾ ಮಂಡಳಿಯ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು: ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡುವ ನಾಗರಿಕ ಸೇವಾ ಮಂಡಳಿಯ ಸ್ಥಾಪನೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಾರ್ಯಕಾರಿ ಆದೇಶದೊಂದಿಗೆ ಅನಿರ್ದಿಷ್ಠ ಅವಧಿಗೆ ಗಾಳಿಯಲ್ಲಿ ತೂರುವಂತೆ ರಾಜ್ಯ ಸರ್ಕಾರ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಂಡಳಿ ರಚಿಸಲು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಸಿಎಟಿ ಅಂಶಗಳನ್ನು ದೃಢಪಡಿಸುತ್ತಾ, ಐಎಎಸ್ ಅಧಿಕಾರಿ ಬಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡುವ ಆದೇಶವನ್ನು ಮರುಪರಿಶೀಲಿಸುವಂತೆ ಮತ್ತು ಅದರ ಹಿಂದಿನ ಆದೇಶದಿಂದ ಪ್ರಭಾವಿತರಾಗದೆ ಸೂಕ್ತ ಆದೇಶವನ್ನು ರವಾನಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಶರತ್ ಅವರನ್ನು ವರ್ಗಾವಣೆ ಮಾಡಿದ ನಂತರ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು.

ನಾಗರಿಕ ಸೇವಾ ಮಂಡಳಿ ಸ್ಥಾಪನೆಗೆ ಆದಷ್ಟು ಬೇಗ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ. ಆದಾಗ್ಯೂ, ಎರಡು ತಿಂಗಳಿಗೆ ಮೀರದಂತೆ ನಾಗರಿಕ ಸೇವಾ ಮಂಡಳಿಯನ್ನು ತ್ವರಿತಗತಿಯಲ್ಲಿ ಸ್ಥಾಪಿಸಬೇಕೆಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ಎಸ್. ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಹೇಳಿತು.

ಶರತ್ ಅವರ ವರ್ಗಾವಣೆ ಭಾರತೀಯ ಆಡಳಿತಾತ್ಮಕ ಸೇವೆ (ಕೇಡರ್) ನಿಯಮ 1954ಕ್ಕೆ ವಿರುದ್ಧವಾಗಿದೆ. ಇದರಲ್ಲಿ ಕನಿಷ್ಠ 2 ವರ್ಷಗಳ ಅವಧಿಗೆ ಡಿಸಿಯಾಗಿ ಕಾರ್ಯನಿರ್ವಹಿಸಬೇಕು ಎನ್ನಲಾಗಿದೆ. ಈ ಅವಧಿಗೂ ಮುನ್ನ ಯಾವುದೇ ವರ್ಗಾವಣೆ ಮಾಡಬೇಕಾದರೆ ನಾಗರಿಕ ಸೇವಾ ಮಂಡಳಿಯಿಂದ ಶಿಫಾರಸ್ಸು ಆಗಿರಬೇಕು ಎಂದು ಶರತ್ ಅವರ ಒತ್ತಾಯವಾಗಿದೆ.

ಶರತ್ ಅವರ ಮನವಿಯನ್ನು ಆಲಿಸಿದ ಸಿಎಟಿ, ನಾಗರಿಕ ಸೇವಾ ಮಂಡಳಿಗೆ ಮಾನ್ಯ ಇಲ್ಲದಂತೆ ಮಾಡಿರುವುದು ಅಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ ಮತ್ತು ವರ್ಗಾವಣೆ ಆದೇಶವನ್ನು ಮರುಪರಿಶೀಲಿಸುವಂತೆ ಮತ್ತು ಸಿಎಸ್ ಬಿಯ ನಿಯಮಗಳನ್ನು ಅನುಸರಿಸುವಂತೆ ರಾಜ್ಯದ ಕಾರ್ಯನಿರ್ವಾಹಕ ಪ್ರಾಧಿಕಾರದ ಮುಖ್ಯಸ್ಥರಿಗೆ ಆದೇಶಿಸಿತ್ತು.

ಇದನ್ನು ಸರ್ಕಾರ ಹೈಕೋರ್ಟ್ ಮುಂದೆ ಪ್ರಶ್ನಿಸಿತು. ಮತ್ತೊಂದೆಡೆ, ತನ್ನ ವರ್ಗಾವಣೆ ಆದೇಶವನ್ನು ರದ್ದುಗೊಳಿಸದ ನ್ಯಾಯಮಂಡಳಿಯ ಆದೇಶವನ್ನು ಶರತ್ ಪ್ರಶ್ನಿಸಿದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ನಾಗರಿಕ ಸೇವಾ ಮಂಡಳಿಯ ಸ್ಥಾಪನೆ ಬಗ್ಗೆ ಸಿಎಟಿ ನಿಲುವು ಕುರಿತು ರಾಜ್ಯ ಸರ್ಕಾರದ ವಾದಗಳನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com