ಸಂಸತ್ ನಲ್ಲಿ ಮತ್ತೆ 'ಪೆಗಾಸಸ್' ಗದ್ದಲ; ಉಭಯ ಕಲಾಪಗಳು ಮುಂದೂಡಿಕೆ

ಪೆಗಾಸಸ್ ಸ್ನೂಪಿಂಗ್ ವಿವಾದ ಮತ್ತೆ ಸಂಸತ್ ಕಲಾಪಕ್ಕೆ ಅಡ್ಡಿಯಾಗಿದ್ದು, ಮತ್ತೆ ಉಭಯ ಸದನಗಳನ್ನು 1 ಗಂಟೆಗಳ ಕಾಲ ಮುಂದೂಡಲಾಯಿತು.
ರಾಜ್ಯಸಭೆ (ಸಂಗ್ರಹ ಚಿತ್ರ)
ರಾಜ್ಯಸಭೆ (ಸಂಗ್ರಹ ಚಿತ್ರ)

ನವದೆಹಲಿ: ಪೆಗಾಸಸ್ ಸ್ನೂಪಿಂಗ್ ವಿವಾದ ಮತ್ತೆ ಸಂಸತ್ ಕಲಾಪಕ್ಕೆ ಅಡ್ಡಿಯಾಗಿದ್ದು, ಮತ್ತೆ ಉಭಯ ಸದನಗಳನ್ನು 1 ಗಂಟೆಗಳ ಕಾಲ ಮುಂದೂಡಲಾಯಿತು.

ವಿರೋಧ ಪಕ್ಷಗಳ ಸದಸ್ಯರು, ನಿಯಮ 267 ರ ಅಡಿಯಲ್ಲಿ 15 ನೋಟಿಸ್‌ಗಳನ್ನು ನೀಡಿದ್ದು, ತಮ್ಮ ವಿಷಯದ ಬಗ್ಗೆ ಚರ್ಚೆಗೆ ಕಾಲಾವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ಅಲ್ಲದೆ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು  ಅವರು ಸದಸ್ಯರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರಾದರೂ ಸದಸ್ಯರು ಶಾಂತಿ ಕಾಪಾಡದ ಹಿನ್ನಲೆಯಲ್ಲಿ ಸದನವನ್ನು ಒಂದು ಗಂಟೆಗಳ ಕಾಲ ಮೂಂದೂಡಿದರು.  

ಸೋಮವಾರ ನೀಡಲಾಗಿದ್ದ 17 ನೋಟಿಸ್ ಗಳನ್ನು ತಿರಸ್ಕರಿಸಿದಂತೆಯೇ ಇಂದೂ ಕೂಡ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಸದಸ್ಯರ 15 ನೋಟಿಸ್ ಗಳನ್ನು ತಿರಸ್ಕರಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಆನಂದ್ ಶರ್ಮಾ ಅವರು ನಿಯಮ 267 ಅನ್ನು ತೆಗೆದುಹಾಕಬೇಕು ಅಥವಾ ನಿಯಮ  ಪುಸ್ತಕದಲ್ಲಿ ಇರುವವರೆಗೂ ಅಧ್ಯಕ್ಷರು ನೀಡಲಾದ ನೋಟಿಸ್‌ಗಳನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು. 

"ಇವುಗಳು ಕಾಳಜಿಯ ವಿಷಯಗಳಾಗಿದ್ದು, ನಾವು ಅದರ ಬಗ್ಗೆ ಪತ್ರಿಕೆಗಳಲ್ಲಿ ಮಾತ್ರವೇ ಓದಬಾರದು ಅಥವಾ ದೂರದರ್ಶನದಲ್ಲಿ ನೋಡಬಾರದು. ಈ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲೇಬೇಕು. ನಿಯಮ 267 ರ ಅವಶ್ಯಕತೆಯಿದೆ. ನಾನು ಸದನದಲ್ಲಿದ್ದೇನೆ ಮತ್ತು ರಾಷ್ಟ್ರೀಯ ಭದ್ರತೆಯ ಸಮಸ್ಯೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಏನಾದರೂ ಗಂಭೀರವಾದ ಘಟನೆ ಸಂಭವಿಸಿದರೆ, ನೀವು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಆ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಆದರೆ ಇದು ಅಧ್ಯಕ್ಷರಿಗೆ ನೋಟಿಸ್ ನೀಡುವ ಮೂಲಕ ಚರ್ಚೆ ಮಾಡಬೇಕಿದೆ ಎಂಬುದನ್ನು ನಾವೂ ಒಪ್ಪಿಕೊಳ್ಳುತ್ತೇವೆ. ಇದೇ ಕಾರಣಕ್ಕೆ ಸೋಮವಾರ ಮತ್ತು ಮಂಗಳವಾರ ನೀಡಲಾದ ನೋಟಿಸ್‌ಗಳು ಹೆಚ್ಚಾಗಿ "ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದೆ. ಅವುಗಳಲ್ಲಿ ಕೆಲವು ದೀರ್ಘಕಾಲದವರೆಗೆ ನಡೆಯುತ್ತಿವೆ, ಮತ್ತೆ  ಕೆಲವು ಮೊದಲೇ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಆದರೆ ಇದಕ್ಕೆ ಒಪ್ಪದ ರಾಜ್ಯಸಭಾಧ್ಯಕ್ಷ ನಾಯ್ಡು ಅವರು, ಪಟ್ಟಿ ಮಾಡಲಾದ ಅಧಿಕೃತ ನೋಟಿಸ್ ಗಳನ್ನು ಮೇಜಿನ ಮೇಲೆ ಇಡಬೇಕೆಂದು ಹೇಳಿದರು. ಈ ವೇಳೆ ಸಮಾಧಾನಗೊಳ್ಳದ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.ಈ ವೇಳೆ ನಾಯ್ಡು ಅವರು ಕಲಾಪವನ್ನು ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com