ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರಸ್ತುತ 3.20 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯ: ಕೇಂದ್ರ

ಪ್ರಸ್ತುತ ರಾಜ್ಯಗಳು, ಕೇಂದ್ರ ಪ್ರದೇಶ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 3.20 ಕೋಟಿ ಕೋವಿಡ್ -19 ಲಸಿಕೆ ಡೋಸ್ ಗಳು ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಸ್ತುತ ರಾಜ್ಯಗಳು, ಕೇಂದ್ರ ಪ್ರದೇಶ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 3.20 ಕೋಟಿ ಕೋವಿಡ್ -19 ಲಸಿಕೆ ಡೋಸ್ ಗಳು ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈವರೆಗೆ ಎಲ್ಲಾ ಮೂಲಗಳ ಮೂಲಕ ಒಟ್ಟು 43,79,78,900 ಲಸಿಕೆ ಡೋಸ್ ಗಳನ್ನು ಸ್ವೀಕರಿಸಿದ್ದು, ಇನ್ನೂ 7,00,000 ಡೋಸ್ ಗಳು ಹಾದಿಯಲ್ಲಿದೆ ಎಂದು ಹೇಳಿದೆ.

ವ್ಯರ್ಥ ಸೇರಿದಂತೆ ಇದುವರೆಗೆ ಒಟ್ಟು 40,59,77,410 ಡೋಸ್ ಗಳು ಬಳಕೆಯಾಗಿವೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ದತ್ತಾಂಶವನ್ನು ಉಲ್ಲೇಖಿಸಿ ಸಚಿವಾಲಯ ಮಾಹಿತಿ ನೀಡಿದೆ.

3.20 ಕೋಟಿಗೂ ಹೆಚ್ಚು ಅಂದರೆ ಸುಮರು 3,20,01,490 ಬಳಕೆಯಾಗದ ಡೋಸ್ ಗಳು ಇನ್ನೂ ರಾಜ್ಯಗಳು, ಯುಟಿಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿವೆ ಎಂದು ಸಚಿವಾಲಯ ತಿಳಿಸಿದೆ.

ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com