ಪೆಗಾಸಸ್ ವಿವಾದ: ರಾಜ್ಯಸಭೆಯಲ್ಲಿ ಕಾಗದ ಪತ್ರ ಹರಿದು ಗಾಳಿಗೆ ತೂರಿದ ಟಿಎಂಸಿ ಸಂಸದರು!

ಇಸ್ರೇಲಿ ಕಂಪನಿ ಸ್ಪೈವೇರ್ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪ ಕುರಿತಂತೆ ಮಾಹಿತಿ ತಂತ್ರಜ್ಞಾನ  ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಹೇಳಿಕೆ ನೀಡಲು ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಟಿಎಂಸಿ ಸಂಸದರು ಕಾಗದ ಪತ್ರಗಳನ್ನು ಹರಿದು ಹಾಕಿ, ಅವುಗಳನ್ನು ಗಾಳಿಯಲ್ಲಿ ತೂರಿದರು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಇಸ್ರೇಲಿ ಕಂಪನಿ ಸ್ಪೈವೇರ್ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪ ಕುರಿತಂತೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಹೇಳಿಕೆ ನೀಡಲು ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಟಿಎಂಸಿ ಸಂಸದರು ಕಾಗದ ಪತ್ರಗಳನ್ನು ಹರಿದು ಹಾಕಿ, ಅವುಗಳನ್ನು ಗಾಳಿಯಲ್ಲಿ ತೂರಿದರು.

ಪೆಗಾಸಸ್ ವಿವಾದ ಕುರಿತು ಹೇಳಿಕೆ ನೀಡಲು ವೈಷ್ಣವ್ ಅವರನ್ನು ಆಹ್ವಾನಿಸಿದಾಗ ಟಿಎಂಸಿ ಮತ್ತಿತರ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ತೆರಳಿ, ಘೋಷಣೆ ಕೂಗಿದರು. ಸಚಿವರು ನೀಡಬೇಕಾದ ಹೇಳಿಕೆಯ ಕಾಗದ ಪತ್ರಗಳನ್ನು ಹರಿದು ಹಾಕಿ,  ಅವುಗಳನ್ನು ಗಾಳಿಯಲ್ಲಿ ತೂರಿದರು. ಇದರಿಂದಾಗಿ ಸಚಿವರು ಹೇಳಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಅದರ ಪ್ರತಿಯನ್ನು ಸದನದ ಮೇಜಿನ ಮೇಲೆ ಇಟ್ಟರು.

ದಿನದ ಮಟ್ಟಿಗೆ ಕಲಾಪವನ್ನು ಮುಂದೂಡುವ ಮೊದಲು ಸಂಸದರು ಅಸಂಸದೀಯ ನಡವಳಿಯಕೆಯನ್ನು ಪ್ರದರ್ಶಿಸಬಾರದೆಂದು  ಉಪ ಸಭಾಪತಿ ಹರಿವಂಶ್ ಕೇಳಿಕೊಂಡರು. ಯಾವುದೇ ಕಾಗದ ಪತ್ರಗಳ ಮಂಡನೆಗೆ ಅವಕಾಶ ನೀಡದ ಪ್ರತಿಪಕ್ಷ ಸಂಸದರು, ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಎರಡು ಬಾರಿ ಸದನವನ್ನು ಮುಂದೂಡಲಾಗಿತ್ತು. ಪೆಗಾಸಸ್ ಮತ್ತಿತರ ವಿಷಯಗಳ ಆರೋಪ ಕುರಿತಂತೆ ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗಿ ಗದ್ದಲವೆಬ್ಬಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com