ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ: ಇಬ್ಬರು ಟಿಎಂಸಿ ಬೆಂಬಲಿಗರ ಹತ್ಯೆ, 5 ಮಂದಿಗೆ ಗಾಯ!

ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ ವರದಿಯಾಗಿದ್ದು ಓರ್ವ ಹಿರಿಯ ಮಹಿಳೆ ಸೇರಿದಂತೆ ಟಿಎಂಸಿಯ ಇಬ್ಬರು ಬೆಂಬಲಿಗರನ್ನು ಹತ್ಯೆ ಮಾಡಲಾಗಿದ್ದು ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. 

Published: 22nd July 2021 03:07 AM  |   Last Updated: 22nd July 2021 01:06 PM   |  A+A-


murder (image for representational purpose only)

ಹತ್ಯೆ (ಸಾಂಕೇತಿಕ ಚಿತ್ರ)

Posted By : Srinivas Rao BV
Source : Online Desk

ಬರಸಾತ್ : ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ ವರದಿಯಾಗಿದ್ದು ಓರ್ವ ಹಿರಿಯ ಮಹಿಳೆ ಸೇರಿದಂತೆ ಟಿಎಂಸಿಯ ಇಬ್ಬರು ಬೆಂಬಲಿಗರನ್ನು ಹತ್ಯೆ ಮಾಡಲಾಗಿದ್ದು ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. 

ಪಶ್ಚಿಮ ಬಂಗಾಳದ ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಗುರುತು ಸಿಗದ ವ್ಯಕ್ತಿಗಳು ಗುಂಡು ಹಾರಿಸಿ ಈ ಹತ್ಯೆ ಮಾಡಿದ್ದಾರೆ. 

ಟಿಎಂಸಿ ಈ ಘಟನೆಗೆ ವಿಪಕ್ಷ ಬಿಜೆಪಿ ಕಾರಣ ಎಂದು ಆರೋಪಿಸಿದ್ದು, ಬಿಜೆಪಿ ಇದು ಆಡಳಿತರೂಢದ ಆಂತರಿಕ ಕಲಹಕ್ಕೆ ಸಂಬಂಧಿಸಿದ್ದಾಗಿದೆ ಎಂದು ಪ್ರತ್ಯಾರೋಪ ಮಾಡಿದೆ. ಹರೋವಾ ಪೊಲೀಸ್ ಠಾಣೆಯ ತಂಗ್ರ ಮಾರಿ ಪ್ರದೇಶದಲ್ಲಿ ನಡೆದ ಈ ದುರ್ಘಟನೆಯಲ್ಲಿ 75 ವರ್ಷದ ಲಕ್ಷ್ಮಿ ಬಾಲ ಮಂಡಲ್ ಹಾಗೂ 25 ವರ್ಷದ ಸನ್ಯಶಿ ಸರ್ದಾರ್ ಮೃತ ದುರ್ದೈವಿಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp