ಜಮ್ಮು: ಸ್ಫೋಟಕ ಸಾಗಿಸುತ್ತಿದ್ದ ಡ್ರೋಣ್ ಹೊಡೆದುರುಳಿಸಿದ ಪೊಲೀಸರು

ಜಮ್ಮು ನಗರ ಹೊರವಲಯದ ಕನ್ಹಚಾಕ್‍ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸಿದ್ದ ಡ್ರೋಣ್‍ ವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ಹೊಡೆದುರುಳಿಸಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಜಮ್ಮು ನಗರ ಹೊರವಲಯದ ಕನ್ಹಚಾಕ್‍ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸಿದ್ದ ಡ್ರೋಣ್‍ ವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ಹೊಡೆದುರುಳಿಸಿದ್ದಾರೆಂದು ತಿಳಿದುಬಂದಿದೆ.

ಕಳೆದ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕನ್ಹಚಾಕ್‍ ಪ್ರದೇಶದಲ್ಲಿ ಡ್ರೋಣ್‍ ಅನ್ನು ಹೊಡೆದುರುಳಿಸಿ, ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. 

ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಹಾರಾಡುತ್ತಿದ್ದ ವಸ್ತುವೊಂದನ್ನು ಗಮನಿಸಿದ ಪೊಲೀಸರು ಕೂಡಲೇ ಕೆಲ ಸುತ್ತು ಗುಂಡು ಹಾರಿಸಿದ್ದಾರೆ.

ಸ್ಪೋಟಕಗಳನ್ನು ಹೊತ್ತ ಡ್ರೋನ್‌, ಅಂತರರಾಷ್ಟ್ರೀಯ ಗಡಿಯಲ್ಲಿ 7 ರಿಂದ 8 ಕಿಲೋಮೀಟರ್‌ ಒಳಭಾಗದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.

ಡ್ರೋಣ್'ನ್ನು ಹೊಡೆದುರುಳಿಸಿರುವ ಡ್ರೋಣ್'ನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಅದರಿಂದ ಐದು ಕೆಜಿ ತೂಕದ ಐಇಡಿ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com