ಕೋವ್ಯಾಕ್ಸಿನ್: ಬ್ರೆಜಿಲ್ ನ 2 ಕಂಪನಿಗಳೊಂದಿಗಿನ ಭಾರತ್ ಬಯೋಟೆಕ್  ಒಪ್ಪಂದ ರದ್ದು!

ಬ್ರೆಜಿಲ್ ನಲ್ಲಿ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ನ್ನು ಪರಿಚಯಿಸುವ ನಿಟ್ಟಿನಲ್ಲಿ ಅಲ್ಲಿನ 2 ಕಂಪನಿಗಳೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಭಾರತ್ ಬಯೋಟೆಕ್ ರದ್ದುಗೊಳಿಸಿದೆ. 
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

ನವದೆಹಲಿ: ಬ್ರೆಜಿಲ್ ನಲ್ಲಿ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ನ್ನು ಪರಿಚಯಿಸುವ ನಿಟ್ಟಿನಲ್ಲಿ ಅಲ್ಲಿನ 2 ಕಂಪನಿಗಳೊಂದಿಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಭಾರತ್ ಬಯೋಟೆಕ್ ರದ್ದುಗೊಳಿಸಿದೆ. 

ಈ ಬಗ್ಗೆ ಭಾರತ್ ಬಯೋಟೆಕ್ ಮಾಹಿತಿ ನೀಡಿದ್ದು, ಪ್ರೆಸಿಸಾ ಮೆಡಿಕಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್ಎಲ್ ಸಿ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ. 

"ಕೋವ್ಯಾಕ್ಸಿನ್ ನ್ನು ಬ್ರೆಜಿಲ್ ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಕ್ಕಾಗಿ ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳೊಂದಿಗೆ ಎಂಒಯುಗೆ ಸಹಿ ಹಾಕಿತ್ತು. ಈ ತಕ್ಷಣದಿಂದಲೇ ಈ ಒಪ್ಪಂದ ರದ್ದಾಗುತ್ತಿದೆ" ಎಂದು ಅಧಿಕೃತ ಪ್ರಕಟಣೆಯಲ್ಲಿ ಭಾರತೀಯ ಸಂಸ್ಥೆ ತಿಳಿಸಿದೆ. 

ಸಂಸ್ಥೆಗಳೊಂದಿಗಿನ ಒಪ್ಪಂದದಿಂದ ಹೊರಬರಲಾಗಿದೆಯಾದರೂ ಬ್ರೆಜಿಲ್ ನ ಔಷಧ ನಿಯಂತ್ರಕ ಸಂಸ್ಥೆ ಅನ್ವಿಸಾ(ANVISA) ದೊಂದಿಗೆ  ಕೊವಾಕ್ಸಿನ್‌ಗಾಗಿ ನಿಯಂತ್ರಕ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಲು ಶ್ರದ್ಧೆಯಿಂದ ಕೆಲಸ ಮಾಡಲಿದೆ ಎಂದು ಭಾರತ್ ಬಯೋಟೆಕ್ ಮಾಹಿತಿ ನೀಡಿದೆ. ತನ್ನ ಲಸಿಕೆಯನ್ನು ವಿವಿಧ ರಾಷ್ಟ್ರಗಳಲ್ಲಿ ಪರಿಚಯಿಸಲು  ಕಾನೂನು ಅಗತ್ಯತೆಗಳ ಪ್ರಕಾರವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಭಾರತ್ ಬಯೋಟೆಕ್ ಮಾಹಿತಿ ನೀಡಿದೆ. 

ಜಾಗತಿಕ ಮಟ್ಟದಲ್ಲಿ ಕೋವ್ಯಾಕ್ಸಿನ್ ದರವನ್ನು ಪ್ರತಿ ಡೋಸ್ ಗೆ 15-20 ಡಾಲರ್ ಗಳಿಗೆ ನಿಗದಿಪಡಿಸಲಾಗಿದೆ. ಅಂತೆಯೇ ಕೋವ್ಯಾಕ್ಸಿನ್ ನ್ನು ಬ್ರೆಜಿಲ್ ಸರ್ಕಾರಕ್ಕೆ ಪ್ರತಿ ಡೋಸ್ ಗೆ 15 ಡಾಲರ್ ಗೆ ದರವನ್ನು ನಿಗದಿಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. 

ಬ್ರೆಜೆಲ್ ನಿಂದ ಯಾವುದೇ ಮುಂಗಡ ಹಣವನ್ನು ಸಂಸ್ಥೆ ಪಡೆದಿಲ್ಲ ಆರೋಗ್ಯ ಸಚಿವಾಲಯಕ್ಕೂ ಲಸಿಕೆಗಳನ್ನು ನೀಡಲಾಗಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com