ಮೊಬೈಲ್ ನಲ್ಲಿ ಮಾತನಾಡುತ್ತಿದ್ದಕ್ಕೆ ಇಬ್ಬರು ಹದಿಹರೆಯದ ಹುಡುಗಿಯರನ್ನು ಥಳಿಸಿದ ಗ್ರಾಮಸ್ಥರು!

ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಕ್ಕೆ ಇಬ್ಬರು ಹದಿಹರೆಯದ ಹುಡುಗಿಯರನ್ನು ಸಂಬಂಧಿಕರು ಸೇರಿದಂತೆ ಗ್ರಾಮದ ಗುಂಪೊಂದು ನಿಂದಿಸಿ, ಥಳಿಸಿರುವ ಘಟನೆ ಗುಜರಾತ್ ರಾಜ್ಯದ ದಾಹೋಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಾಹೋಡ್: ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಕ್ಕೆ ಇಬ್ಬರು ಹದಿಹರೆಯದ ಹುಡುಗಿಯರನ್ನು ಸಂಬಂಧಿಕರು ಸೇರಿದಂತೆ ಗ್ರಾಮದ ಗುಂಪೊಂದು ನಿಂದಿಸಿ, ಥಳಿಸಿರುವ ಘಟನೆ ಗುಜರಾತ್ ರಾಜ್ಯದ ದಾಹೋಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭುವೇರಾ ಹಳ್ಳಿಯಲ್ಲಿ ಜೂನ್ 25 ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ರೆಕಾರ್ಡಿಂಗ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಡುಗಿಯರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಎಫ್ ಐಆರ್ ದಾಖಲಾಗಿದೆ. ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಕ್ಕೆ 13 ಹಾಗೂ 16 ವರ್ಷದ ಹುಡುಗಿಯರ ಮೇಲೆ 15 ಜನರ ಗುಂಪೂಂದು ಹಿಗ್ಗಾಮುಗ್ಗಾ ಥಳಿಸಿದೆ ಎಂದು ದಾನ್ ಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹುಡುಗಿಯರನ್ನು ಸುತ್ತುವರೆದಿರುವ ಗುಂಪೊಂದು ಮಾತಿನ ಮೂಲಕ ನಿಂದಿಸುತ್ತಿದ್ದ ಕೊಲ್ಲುವುದಾಗಿ ಬೆದರಿಕೆ ಹಾಕಿ, ಹಲ್ಲೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಘಟನೆ ನಡೆದು ಒಂದು ತಿಂಗಳಾಗಿದ್ದರೂ ಯಾವುದೇ ದೂರು ದಾಖಲಾಗಿರಲಿಲ್ಲ. ವಿಡಿಯೋವನ್ನು ಪೊಲೀಸರು ನೋಡಿದ ಬಳಿಕ ಆ ಹುಡುಗಿಯರ ಕುಟುಂಬಸ್ಥರು ಕೂಡಾ ಇದೇ ರೀತಿ ಮಾಹಿತಿ ನೀಡಿದ್ದು, 15 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಸಿಪಿ ಸೆಕ್ಷನ್ 143 ಮತ್ತು 149 ( ಕಾನೂನುಬಾಹಿರವಾಗಿ ಸೇರುವುದು) 147 ( ಹಿಂಸಾಚಾರ)323 (ಸ್ವಯಂ ಪ್ರೇರಣೆಯಿಂದ ನೋವುಂಟು ಮಾಡುವುದು)ಮತ್ತಿತರ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com