ಭೀಕರ ವಿಡಿಯೋ: ಹಿಮಾಚಲ ಪ್ರದೇಶದಲ್ಲಿ ಬಂಡೆಗಳು ಬಿದ್ದು ಸೇತುವೆ ಕುಸಿತ: 9 ಪ್ರವಾಸಿಗರ ದುರ್ಮರಣ

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಕಣಿವೆಯಲ್ಲಿ ಬಂಡೆಗಳು ಉರುಳಿ ಬಿದ್ದು ಸೇತುವೆ ಕುಸಿದಿರುವ ಭೀಕರ ವಿಡಿಯೋ ವಿಡಿಯೋ ವೈರಲ್ ಆಗಿದೆ.
ಭೂಕುಸಿತ
ಭೂಕುಸಿತ

ನವದೆಹಲಿ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಸಾಂಗ್ಲಾ ಕಣಿವೆಯಲ್ಲಿ ಬಂಡೆಗಳು ಉರುಳಿ ಬಿದ್ದು ಸೇತುವೆ ಕುಸಿದಿರುವ ಭೀಕರ ವಿಡಿಯೋ ವಿಡಿಯೋ ವೈರಲ್ ಆಗಿದೆ.

ಪರ್ವತದ ಮೇಲಿಂದ ದೊಡ್ಡ ಬಂಡೆಗಳು ಉರುಳಿ ಬಿದ್ದಿವೆ. ಬಂಡೆಯೊಂದು ಟೆಂಪೊ ಟ್ರಾವಲರ್ ಮೇಲೆ ಬಿದ್ದಿದ್ದು 9 ಮಂದಿ ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪರ್ವತದ ಮೇಲಿಂದ ಬಂಡೆಗಳು ಉರುಳಿಕೊಂಡು ಬರುತ್ತಿರುವ ವಿಡಿಯೋಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಭೂಕುಸಿತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿರುವ ಕುರಿತು ಕಿನ್ನೌರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಾಜು ರಾಮ್ ರಾಣಾ ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com