ಭಾರತದ ಪ್ರಯಾಣಿಕ ವಿಮಾನ ನಿರ್ಬಂಧ ಆಗಸ್ಟ್ 2ರ ವರೆಗೆ ವಿಸ್ತರಿಸಿದ ಯುಎಇ

ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಸಂಚರಿಸುವ ವಿಮಾನಗಳನ್ನು ಆಗಸ್ಟ್ 2 ರವರೆಗೆ ನಿರ್ಬಂಧಿಸಲಾಗುವುದು ಎಂದು ರಾಷ್ಟ್ರೀಯ ವಾಹಕ ಎತಿಹಾಡ್ ಏರ್ವೇಸ್ ಸೋಮವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಸಂಚರಿಸುವ ವಿಮಾನಗಳನ್ನು ಆಗಸ್ಟ್ 2 ರವರೆಗೆ ನಿರ್ಬಂಧಿಸಲಾಗುವುದು ಎಂದು ರಾಷ್ಟ್ರೀಯ ವಾಹಕ ಎತಿಹಾಡ್ ಏರ್ವೇಸ್ ಸೋಮವಾರ ತಿಳಿಸಿದೆ.

ಯುಎಇ ಅಧಿಕಾರಿಗಳ ನಿರ್ದೇಶನಗಳಿಗೆ ಅನುಗುಣವಾಗಿ ದಿನಾಂಕವನ್ನು ಮತ್ತೆ ವಿಸ್ತರಿಸಬಹುದು ಎಂದು ಖಲೀಜ್ ಟೈಮ್ಸ್ ಎತಿಹಾಡ್ ಏರ್ವೇಸ್ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.

"ಆಗಸ್ಟ್ 2 ರವರೆಗೆ ಭಾರತದಿಂದ ಆಗಮಿಸುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ದೃಢಿಕರಣವನ್ನು ನಾವು ಸ್ವೀಕರಿಸಿದ್ದೇವೆ ಮತ್ತು ಇದು ಅಧಿಕಾರಿಗಳನ್ನು ಅವಲಂಬಿಸಿರುವುದರಿಂದ ಇದನ್ನು ವಿಸ್ತರಿಸಲಾಗುತ್ತದೆಯೇ ಎಂದು ನಮಗೆ ಸಂಪೂರ್ಣವಾಗಿ ತಿಳಿದಿಲ್ಲ" ಎಂದು ಎತಿಹಾಡ್ ಏರ್ವೇಸ್ ಟ್ವೀಟರ್ ನಲ್ಲಿ ತಿಳಿಸಿದೆ.

ಕೋವಿಡ್-19 ಡೆಲ್ಟಾ ರೂಪಾಂತರದಿಂದಾಗಿ ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳ ನಿಷೇಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದಾಗಿ ಕೆನಡಾ ಸರ್ಕಾರ ಕಳೆದ ತಿಂಗಳು ಪ್ರಕಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com