ಅಸ್ಸಾಂ- ಮಿಜೋರಾಂ ಗಡಿಯಲ್ಲಿ ಹಿಂಸಾಚಾರ: ಶಾ ವಿರುದ್ಧ ಕಾಂಗ್ರೆಸ್ ಕಿಡಿ
ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಸೋಮವಾರ ಸಂಭವಿಸಿದ ಹಿಂಸಾಚಾರದಲ್ಲಿ ಆರು ಮಂದಿ ಪೊಲೀಸರು ಸಾವನ್ನಪ್ಪಿದ್ದ ಘಟನೆ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
Published: 27th July 2021 12:52 AM | Last Updated: 27th July 2021 12:52 AM | A+A A-

ಅಮಿತ್ ಶಾ
ನವದೆಹಲಿ: ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ಸೋಮವಾರ ಸಂಭವಿಸಿದ ಹಿಂಸಾಚಾರದಲ್ಲಿ ಆರು ಮಂದಿ ಪೊಲೀಸರು ಸಾವನ್ನಪ್ಪಿದ್ದ ಘಟನೆ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಸಮಸ್ಯೆ ಬಗೆಹರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದ ಒಂದು ದಿನದ ಅಂತರದಲ್ಲೇ ಉದ್ವಿಗ್ನತೆ ಹೆಚ್ಚಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಈಶಾನ್ಯ ಪ್ರಜಾಸತಾತ್ಮಕ ಒಕ್ಕೂಟಕ್ಕೆ (ನೆಡಾ) ಸೇರಿದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಉದ್ವಿಗ್ನತೆ ಬಿಗಡಾಯಿ ಸಿರುವಂತೆಯೇ ಟ್ವಿಟರ್ ನಲ್ಲಿ ಪರಸ್ಪರ ಬಹಿರಂಗ ವಾದದಲ್ಲಿ ತೊಡಗಿರುವುದಾಗಿ ಕಳವಳಕಾರಿ ಸಂಗತಿಯಾಗಿದೆ ಎಂದಿದೆ.
ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗಡಿ ವಿಚಾರ ಕುರಿತಂತೆ ಈಶಾನ್ಯ ರಾಜ್ಯಗಳು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದಾರೆ. ಅವರ ನಡುವೆ ಏನು ರವಾನೆಯಾಗಿದೆ? ಗಡಿ ವಿವಾದಗಳನ್ನು ತಗ್ಗಿಸುವ ನೀತಿಗಳು ಯಾವುವು ಎಂದು ತಿಳಿಯಲು ಕಾಂಗ್ರೆಸ್ ಬಯಸಿದ್ದು, ಬಿಜೆಪಿ ಸರ್ಕಾರ ಟ್ವಿಟರ್ ಮೂಲಕ ದೇಶವನ್ನು ನಡೆಸುತ್ತಿದೆ ಎಂಬುದನ್ನು ತೋರುತ್ತದೆ ಎಂದು ಟೀಕಿಸಿದೆ.