ಭಾರತ ಇಲ್ಲಿಯವರೆಗೆ 26 ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸಿದೆ: ಕೇಂದ್ರ ಸರ್ಕಾರ

36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ಪೈಕಿ ಡಸಾಲ್ಟ್ ಏವಿಯೇಷನ್‌ನಿಂದ ಭಾರತಕ್ಕೆ ಇದುವರೆಗೆ 26  ವಿಮಾನಗಳು ಬಂದಿವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.
ರಫೇಲ್ ವಿಮಾನ
ರಫೇಲ್ ವಿಮಾನ

ನವದೆಹಲಿ: 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ಪೈಕಿ ಡಸಾಲ್ಟ್ ಏವಿಯೇಷನ್‌ನಿಂದ ಭಾರತಕ್ಕೆ ಇದುವರೆಗೆ 26  ವಿಮಾನಗಳು ಬಂದಿವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

"36 ರಫೇಲ್ ವಿಮಾನಗಳ ಡೆಲಿವೆರಿಯು ವೇಳಾಪಟ್ಟಿಯ ಪ್ರಕಾರ ಮುಂದುವರಿಯುತ್ತಿದೆ. ನಿಗದಿ ಮಾಡಿದ ದಿನಾಂಕದಂತೆ ಒಟ್ಟು 26 ವಿಮಾನಗಳನ್ನು ಭಾರತಕ್ಕೆ ಸಾಗಿಸಲಾಗಿದೆ" ಎಂದು ಭಟ್ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಫ್ರೆಂಚ್ ಏರೋಸ್ಪೇಸ್ ಡಸಾಲ್ಟ್ ಏವಿಯೇಷನ್ ನಿರ್ಮಿಸಿದ ರಫೇಲ್ ಜೆಟ್‌ಗಳು ವೈಮಾನಿಕ ಶ್ರೇಷ್ಠತೆ ಮತ್ತು ನಿಖರ ದಾಳಿಗೆ ಹೆಸರುವಾಸಿಯಾಗಿವೆ.

59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗೆ ಭಾರತ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ, 2020 ರ ಜುಲೈ 29 ರಂದು ಐದು ರಫೇಲ್ ಜೆಟ್‌ಗಳ ಮೊದಲ ಬ್ಯಾಚ್ ಭಾರತಕ್ಕೆ ಬಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com