ದೆಹಲಿ: ಜೈಲಿನಲ್ಲಿರುವ ಭೂಗತ ಪಾತಕಿ ಛೋಟಾ ರಾಜನ್ ಏಮ್ಸ್ ಗೆ ದಾಖಲು

ಜೈಲಿನಲ್ಲಿರುವ ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಏಮ್ಸ್) ದಾಖಲಾಗಿದ್ದಾರೆ.
ಛೋಟಾ ರಾಜನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವುದು(ಸಂಗ್ರಹ ಚಿತ್ರ)
ಛೋಟಾ ರಾಜನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವುದು(ಸಂಗ್ರಹ ಚಿತ್ರ)

ನವದೆಹಲಿ: ಜೈಲಿನಲ್ಲಿರುವ ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಏಮ್ಸ್) ದಾಖಲಾಗಿದ್ದಾರೆ.

"ರಾಜನ್‌ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ. ಇಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಆದಾಗ್ಯೂ, ಭೂಗತ ಪಾತಕಿಯ ಡಿಸ್ಚಾರ್ಜ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ತಿಹಾರ್ ಜೈಲಿನಲ್ಲಿರುವ 61 ವರ್ಷದ ರಾಜನ್ ಗೆ ಎರಡು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಏಪ್ರಿಲ್ 24 ರಂದು ಏಮ್ಸ್ ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಕರೆತರಲಾಗಿತ್ತು. ಈಗ ಹೊಟ್ಟೆ ನೋವಿನಿಂದ ಮತ್ತೆ ಆಸ್ಪತ್ರೆದೆ ದಾಖಲಾಗಿದ್ದಾರೆ.

ಛೋಟಾ ರಾಜನ್ ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡೀಪಾರು ಮಾಡಿದ ನಂತರ ಬಂಧನಕ್ಕೊಳಪಡಿಸಿ ದೆಹಲಿಯ ಹೈ ಸೆಕ್ಯುರಿಟಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com