ತ್ರಿಪುರಾ: ಪ್ರಶಾಂತ್ ಕಿಶೋರ್ ತಂಡದ ಸದಸ್ಯರಿಗೆ ಜಾಮೀನು ಮಂಜೂರು

ಬಿಜೆಪಿ ಆಡಳಿತದ ತ್ರಿಪುರದಲ್ಲಿ ಬಂಧಿಸಲಾಗಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ತಂಡದ  23 ಸದಸ್ಯರನ್ನು ಇಂದು ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರಿಗೆ ಜಾಮೀನು ನೀಡಿತು.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಅಗರ್ತಲಾ: ಬಿಜೆಪಿ ಆಡಳಿತದ ತ್ರಿಪುರದಲ್ಲಿ ಬಂಧಿಸಲಾಗಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ತಂಡದ  23 ಸದಸ್ಯರನ್ನು ಇಂದು ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರಿಗೆ ಜಾಮೀನು ನೀಡಿತು. ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಪೊಲೀಸರು ಭಾನುವಾರ ರಾತ್ರಿ ಅವರನ್ನು ಬಂಧಿಸಿದ್ದರು.

ತ್ರಿಪುರಾಕ್ಕೆ ಆಗಮಿಸಿದ್ದ ಹಿರಿಯ ಟಿಎಂಸಿ ಮುಖಂಡ ಡೆರ್ರಿಕ್ ಒಬ್ರಿಯಾನ್ ಈ ಘಟನೆ ಹಿಂದೆ ಬಿಜೆಪಿಯ ಕೇಂದ್ರಿಯ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು. ಎಸಿಜೆಎಂ ನ್ಯಾಯಾಧೀಶ ಎಸ್ ಬಿ ದಾಸ್ ಐ-ಪ್ಯಾಕ್ ತಂಡದ ಸದಸ್ಯರಿಗೆ ಜಾಮೀನು ಮಂಜೂರು ಮಾಡಿದರು. ಮಂಗಳವಾರ ಎಫ್ ಐಆರ್ ದಾಖಲಾಗಿರುವುದರಿಂದ ಆಗಸ್ಟ್ 1 ರಂದು ಪೊಲೀಸರ ಮುಂದೆ ಹಾಜರಾಗಲು ಅವರಿಗೆ ಸಮನ್ಸ್ ನೀಡಲಾಯಿತು.

ಕೋವಿಡ್ ಪರೀಕ್ಷಾ ವರದಿ ಲಭ್ಯವಾಗುವವರೆಗೆ ಐ-ಪ್ಯಾಕ್ ತಂಡದ ಸದಸ್ಯರು ಹೋಟೆಲ್ ಒಳಗೆ ಇರಬೇಕಾಗುತ್ತದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು. ಮಂಗಳವಾರ ರಾತ್ರಿ ನೆಗೆಟಿವ್ ವರದಿ ಬಂದಿತ್ತು. ಐ- ಪ್ಯಾಕ್ ತಂಡದ ಸದಸ್ಯರ ಮೇಲಿನ ಕಿರುಕುಳಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಸ್ ದಾಖಲಿಸುವುದಾಗಿ ಅವರ ಪರ ವಕೀಲ ಪಿಜುಶ್ ಕಾಂತಿ ಬಿಸ್ವಾಸ್ ಹೇಳಿದರು. 

 ಉಪ - ವಿಭಾಗೀಯ ಮ್ಯಾಜಿಸ್ಟ್ರೇಟ್ ಸಾದಾರ್, ಪ್ರಶಾಂತ್ ಕಿಶೋರ್ ತಂಡದ ವಿರುದ್ಧ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಪೂರ್ವ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 1 ರಂದು ಭೇಟಿ ಮಾಡುವಂತೆ ವಿಚಾರಣಾಧಿಕಾರಿ ನೋಟಿಸ್ ನೀಡಿದ್ದಾರೆ. ಬಂಧನದ ಭೀತಿಯಿಲ್ಲ. ಆದರೆ, ಈಗ, ಅವರು ನ್ಯಾಯಾಲಯ ಮುಂದೆ ಹಾಜರಾಗಿ ಜಾಮೀನಿಗಾಗಿ ಮೊರೆ ಇಟ್ಟರು. ನ್ಯಾಯಾಲಯ ಜಾಮೀನು ನೀಡಿತು ಎಂದು ಹೆಚ್ಚುವರಿ ಪಬ್ಲಿಕ್ ಪ್ಯಾಸಿಕ್ಯೂಟರ್ ಬಿದ್ಯುತ್ ಸೂತ್ರಧರ್ ಸುದ್ದಿಗಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com