ಜು.31 ರಂದು ಚೀನಾ-ಭಾರತ ಸೇನೆಯ 12 ನೇ ಸುತ್ತಿನ ಮಾತುಕತೆ: ಪ್ರಗತಿಯ ವಿಶ್ವಾಸದಲ್ಲಿ ಭಾರತ 

ಭಾರತ-ಚೀನಾ ಸೇನೆ ನಡುವೆ 12 ನೇ ಸುತ್ತಿನ ಮಾತುಕತೆ ಜು.31 ರಂದು ನಡೆಯಲಿದೆ. 
ಭಾರತ-ಚೀನಾ (ಸಂಗ್ರಹ ಚಿತ್ರ)
ಭಾರತ-ಚೀನಾ (ಸಂಗ್ರಹ ಚಿತ್ರ)

ನವದೆಹಲಿ: ಭಾರತ-ಚೀನಾ ಸೇನೆ ನಡುವೆ 12 ನೇ ಸುತ್ತಿನ ಮಾತುಕತೆ ಜು.31 ರಂದು ನಡೆಯಲಿದೆ. ಈಶಾನ್ಯ ಲಡಾಖ್ ನಲ್ಲಿ ಉಭಯ ಸೇನೆಗಳ ನಡುವೆ ಘರ್ಷಣೆ ಸಂಭವಿಸಿದ್ದ ಕೇಂದ್ರಗಳಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸುವುದಕ್ಕೆ ಈ ಸಭೆಯ ಮೂಲಕ ಭಾರತ ಎದುರು ನೋಡುತ್ತಿದೆ 

ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬೆಳಿಗ್ಗೆ 10:30ಕ್ಕೆ ಚೀನಾ ಕಡೆ ಇರುವ ಎಲ್ಎಸಿಯ ಮೋಲ್ಡೋ ಗಡಿ ಕೇಂದ್ರದಲ್ಲಿ  ಪ್ರಾರಂಭವಾಗಲಿದೆ.  

ಹಾಟ್ ಸ್ಪ್ರಿಂಗ್ಸ್ ಹಾಗೂ ಗೋಗ್ರಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಮಾತುಕತೆಯ ಕೇಂದ್ರವಾಗಿರಲಿದೆ ಎಂದು ಸೇನಾ ಪಡೆಯ ಮೂಲಗಳು ತಿಳಿಸಿವೆ. ಮೂರುವರೆ ತಿಂಗಳ ನಂತರ ಚೀನಾ-ಭಾರತದ ನಡುವೆ ಮಾತುಕತೆ ನಡೆಯುತ್ತಿದೆ. 11 ನೇ ಸುತ್ತಿನ ಮಾತುಕತೆ ಏ.09 ರಂದು ನಡೆದಿತ್ತು. 

ಪಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ಪ್ರದೇಶಗಳಲ್ಲಿ ಉಭಯ ಸೇನೆಗಳೂ ತುಕಡಿಗಳ ಹಾಗೂ ಶಸ್ತ್ರಾಸ್ತ್ರಗಳ ಹಿಂತೆಗೆತವನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಿವೆ. ಈ ಬಳಿಕ ಸೇನಾ ಹಿಂತೆಗೆತದ ಪ್ರಕ್ರಿಯೆ ಪ್ರಗತಿ ಕಂಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com