ಬಾಬುಲ್ ಸುಪ್ರಿಯೋ
ಬಾಬುಲ್ ಸುಪ್ರಿಯೋ

ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ರಾಜಕೀಯಕ್ಕೆ ಗುಡ್ ಬೈ, ಬಿಜೆಪಿ ಸಂಸದ ಸ್ಥಾನ ತ್ಯಜಿಸಲು ನಿರ್ಧಾರ

ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ಅವರು ರಾಜಕೀಯ ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ಹೇಳಿದ್ದಾರೆ.

ಕೋಲ್ಕತ್ತಾ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ಅವರು ರಾಜಕೀಯ ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ಹೇಳಿದ್ದಾರೆ.

ಭಾಗಶಃ ಮಂತ್ರಿ ಸ್ಥಾನವನ್ನು ಕಳೆದುಕೊಂಡ ಕಾರಣ ಮತ್ತು ರಾಜ್ಯ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಾಬುಲ್ ಸುಪ್ರಿಯೋ ಅವರು ಸುಳಿವು ನೀಡಿದ್ದಾರೆ.

2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋ ಅವರನ್ನು ಈ ತಿಂಗಳ ಆರಂಭದಲ್ಲಿ ನಡೆದ ಸಂಪುಟ ಪುನಾರಚನೆ ವೇಳೆ ಅವರನ್ನು ಕೈಬಿಡಲಾಗಿತ್ತು. 

ನನ್ನ ಹೆತ್ತವರು, ಹೆಂಡತಿ, ಸ್ನೇಹಿತರೊಂದಿಗೆ ಮಾತನಾಡಿದೆ ನಂತರ ಮತ್ತು ಸಲಹೆಯನ್ನು ಪಡೆದ ನಂತರ ನಾನು ರಾಜಕೀಯದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

ನಾನು ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ - ಟಿಎಂಸಿ, ಕಾಂಗ್ರೆಸ್, ಸಿಪಿಎಂ, ಎಲ್ಲಿಯೂ ಹೋಗುವುದಿಲ್ಲ. ನನಗೆ ಯಾರೂ ಕರೆ ಮಾಡಿಲ್ಲ ಎಂದು ನಾನು ದೃಢಿಕರಿಸುತ್ತಿದ್ದೇನೆ. 

"ನಾನು ಎಲ್ಲಿಯೂ ಹೋಗುತ್ತಿಲ್ಲ. ನಾನು ಒಂದು ತಂಡದ ಆಟಗಾರ! ಯಾವಾಗಲೂ ಆ ತಂಡವನ್ನು ಬೆಂಬಲಿಸಿದ್ದೇನೆ#ಮೋಹನ್‌ಬಾಗನ್ - ಒಂದೇ ಪಕ್ಷದೊಂದಿಗೆ ಇದ್ದೇನೆ - ಬಿಜೆಪಿ ಪಶ್ಚಿಮ ಬಂಗಾಳ

" ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com