2023ರ ಆರಂಭದಲ್ಲಿ ಇಸ್ರೋ-ನಾಸಾ ಸಹಭಾಗಿತ್ವದ ನಿಸಾರ್ ಉಪಗ್ರಹ ಉಡಾವಣೆ- ಜೀತೇಂದ್ರ ಸಿಂಗ್
ಸುಧಾರಿತ ರೇಡಾರ್ ಇಮೇಜಿಂಗ್ ಬಳಸಿಕೊಂಡು ಜಾಗತಿಕ ಭೂ ಮೇಲ್ಮೈ ಬದಲಾವಣೆಗಳ ಮಾಪನ ಮಾಡುವ ಗುರಿ ಹೊಂದಿರುವ ನಾಸಾ ಮತ್ತು ಇಸ್ರೋ ಸಹಭಾಗಿತ್ವದ ನಿಸಾರ್ ಉಪಗ್ರಹವನ್ನು (ನಾಸಾ- ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ) 2023ರ ಆರಂಭದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಭೂ ವಿಜ್ಞಾನ ಸಚಿವ ಜೀತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
Published: 31st July 2021 02:31 AM | Last Updated: 31st July 2021 02:31 AM | A+A A-

ಜೀತೇಂದ್ರ ಸಿಂಗ್
ನವದೆಹಲಿ: ಸುಧಾರಿತ ರೇಡಾರ್ ಇಮೇಜಿಂಗ್ ಬಳಸಿಕೊಂಡು ಜಾಗತಿಕ ಭೂ ಮೇಲ್ಮೈ ಬದಲಾವಣೆಗಳ ಮಾಪನ ಮಾಡುವ ಗುರಿ ಹೊಂದಿರುವ ನಾಸಾ ಮತ್ತು ಇಸ್ರೋ ಸಹಭಾಗಿತ್ವದ ನಿಸಾರ್ ಉಪಗ್ರಹವನ್ನು (ನಾಸಾ- ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ) 2023ರ ಆರಂಭದಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಜೀತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹ ಇನ್ನೂ ಉಡಾವಣೆ ಮಾಡಿಲ್ಲ, 2023ರ ಆರಂಭದಲ್ಲಿ ಉಡಾವಣೆ ಮಾಡಲಾಗುವುದು ಎಂದರು. ವಿಶ್ವದಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳ ಗುರುತಿಸುವಿಕೆ, ಭೂಕಂಪನದಂತಹ ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯುವುದು ಈ ಯೋಜನೆಯ ಉದ್ದೇಶ ಎಂದು ಹೇಳಿದರು.
ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಅರಿಯುವುದರ ಜೊತೆಗೆ ಭೂಮಿ ಮತ್ತು ಕರಾವಳಿ ಪ್ರದೇಶದ ಪ್ರಕ್ರಿಯೆಗಳ ಸಂಗ್ರಹಕ್ಕೆ ಈ ಉಪಗ್ರಹ ನೆರವಾಗಲಿದೆ ಎಂದು ಅವರು ತಿಳಿಸಿದರು.