ಎರಡನೇ ಅಲೆಯಿಂದ ಕೇರಳ ಸಂಪೂರ್ಣ ಮುಕ್ತವಾಗಿಲ್ಲ, ಹೆಚ್ಚುವರಿ ಎಚ್ಚರಿಕೆ ಅಗತ್ಯ: ಆರೋಗ್ಯ ಸಚಿವೆ ವೀಣಾ ಜಾರ್ಜ್

ಕೇರಳ ಎರಡನೇ ಅಲೆಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ, ಹೆಚ್ಚುವರಿ ಎಚ್ಚರಿಕೆ ಅಗತ್ಯ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ವೀಣಾ ಜಾರ್ಜ್ (ಸಂಗ್ರಹ ಚಿತ್ರ)
ವೀಣಾ ಜಾರ್ಜ್ (ಸಂಗ್ರಹ ಚಿತ್ರ)

ತಿರುವನಂತಪುರಂ: ಕೇರಳ ಎರಡನೇ ಅಲೆಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ, ಹೆಚ್ಚುವರಿ ಎಚ್ಚರಿಕೆ ಅಗತ್ಯ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಎರಡನೇ ಅಲೆಯಿಂದಲೇ ಕೇರಳ ಇನ್ನೂ ಮುಕ್ತಿಪಡೆದಿಲ್ಲ ಮೂರನೇ ಅಲೆಯನ್ನು ತಡೆಗಟ್ಟುವುದಕ್ಕೆ ಜನತೆ ತೀವ್ರವಾದ ಎಚ್ಚರಿಕೆ ವಹಿಸಬೇಕೆಂದು ವೀಣಾ ಜಾರ್ಜ್ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಮೂರನೆ ಅಲೆ ತಡೆಗೆ ಕೈಗೊಂಡಿರುವ ಸಿದ್ಧತೆಗಳ ಪರಿಶೀಲನೆ ಸಭೆಯ ನಂತರ ಮಾತನಾಡಿರುವ ಅವರು, ಕೇರಳದ ಅರ್ಧದಷ್ಟು ಜನಸಂಖ್ಯೆ ಕೊರೋನಾ ವೈರಸ್ ಗೆ  ಒಳಗಾಗಿದ್ದಾರೆ. ಡೆಲ್ಟಾ ರೂಪಾಂತರಿಯನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂದು ವೀಣಾ ಜಾರ್ಜ್ ಹೇಳಿದ್ದಾರೆ

ಬಹುತೇಕ ಮಂದಿ ಲಸಿಕೆ ಹಾಕಿಸಿಕೊಳ್ಳವರೆಗೆ ಐಸೊಲೇಷನ್ ಪಾಲನೆ ಮಾಡುವುದು ಮುಖ್ಯ, ಬಹುಪಾಲು ಮಂದಿ ಲಸಿಕೆ ಹಾಕಿಸಿಕೊಳ್ಳುವುದಕ್ಕೂ ಮುನ್ನ 3 ನೇ ಅಲೆ ಎದುರಾದಲ್ಲಿ ಆಸ್ಪತ್ರೆ ಅಗತ್ಯತೆ ಹಾಗೂ ಸೋಂಕಿತ ತೀವ್ರತೆ ಹೆಚ್ಚಾಗಲಿದೆ ಎಂದು ವೀಣಾ ಜಾರ್ಜ್ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com