ಶಾಲೆ ಪುನರಾರಂಭಕ್ಕೆ ಕಾರ್ಯಪಡೆ ರಚನೆಗೆ ವಿಜ್ಞಾನಿಗಳು,ವೈದ್ಯರ ಒತ್ತಾಯ: ಮೂರು ರಾಜ್ಯಗಳ ಸಿಎಂಗಳಿಗೆ ಪತ್ರ
ಶಾಲೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ವೈಜ್ಞಾನಿಕ ಯೋಜನೆಯ ನೆರವಿಗಾಗಿ ತುರ್ತಾಗಿ ಕಾರ್ಯಪಡೆ ರಚನೆಗಾಗಿ ದೇಶಾದ್ಯಂತ ಸುಮಾರು 50 ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಪರಿಣಿತರೊಂದಿಗೆ ದೆಹಲಿ ಮತ್ತು ಬಾಂಬೆ ಐಐಟಿ ವಿಜ್ಞಾನಿಗಳು ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
Published: 31st July 2021 09:06 PM | Last Updated: 31st July 2021 09:06 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಶಾಲೆಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ವೈಜ್ಞಾನಿಕ ಯೋಜನೆಯ ನೆರವಿಗಾಗಿ ತುರ್ತಾಗಿ ಕಾರ್ಯಪಡೆ ರಚನೆಗಾಗಿ ದೇಶಾದ್ಯಂತ ಸುಮಾರು 50 ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ಪರಿಣಿತರೊಂದಿಗೆ ದೆಹಲಿ ಮತ್ತು ಬಾಂಬೆ ಐಐಟಿ ವಿಜ್ಞಾನಿಗಳು ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳ ಪುನರಾರಂಭ ಸಾಧ್ಯ ಎಂಬ ಪುರಾವೆಗಳ ಹೊರತಾಗಿಯೂ ಕಳೆದ 16 ತಿಂಗಳುಗಳಿಂದ ಶಾಲೆಗಳು ಬಂದ್ ಆಗಿದ್ದರಿಂದ ಕೋಟ್ಯಂತರ ವಿದ್ಯಾರ್ಥಿಗಳ ಕಲಿಕಾ ಅಭಿವೃದ್ಧಿ ಕೊರತೆಗೆ ಕಾರಣವಾಗಿದೆ ಎಂದು ಪರಿಣಿತರು ಹೇಳಿದ್ದಾರೆ. ಐಸಿಎಂಆರ್ ಮುಖ್ಯಸ್ಥ ಬಲರಾಂ ಭಾರ್ಗವ ಮತ್ತು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೆರಿಯಾ ನಂತಹ ಸರ್ಕಾರದ ಉನ್ನತಾಧಿಕಾರಿಗಳು, ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಶಾಲೆ ಪುನರಾಂಭಿಸುವ ಪರವಾಗಿ ವಾದಿಸಿದ ಬೆನ್ನಲ್ಲೇ ತಜ್ಞರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ಬಿಹಾರ, ಒಡಿಶಾದಂತಹ ರಾಜ್ಯಗಳನ್ನು ಹೊರತುಪಡಿಸಿದಂತೆ ಕೆಲ ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದವು. ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳ ಪುನರಾರಂಭ ಸಾಧ್ಯ ಎಂಬ ಪುರಾವೆಗಳ ಹೊರತಾಗಿಯೂ ತಿಂಗಳುಗಟ್ಟಲೇ ಶಾಲೆಗಳನ್ನು ಮುಚ್ಚಿದ್ದರಿಂದ ಕಲಿಕಾ ಮತ್ತು ಅಭಿವೃದ್ಧಿಯಲ್ಲಿ ಕೊರತೆಯಾಗಿದೆ ಎಂದು ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಜ್ಞರು ಹೇಳಿದ್ದಾರೆ.
ಫ್ರಾನ್ಸ್, ಸ್ವಿಡನ್ ಸೇರಿದಂತೆ ವಿಶ್ವದಾದ್ಯಂತ ಸುಮಾರು 170 ರಾಷ್ಟ್ರಗಳಲ್ಲಿ ಶಾಲೆಗಳು ಸಂಪೂರ್ಣವಾಗಿ ಅಥವಾ ಭಾಗಶ: ವಾಗಿ ಪುನರಾರಂಭವಾಗಿರುವುದಾಗಿ ತಜ್ಞರು, ವೈದ್ಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಯಸ್ಕರಿಗೆ ಲಸಿಕೆಗೆ ಇನ್ನೂ ಕೆಲ ತಿಂಗಳುಗಳು ಹಿಡಿಯಬಹುದು ಎಂದು ತಜ್ಞರ ಗುಂಪು ಒತ್ತಿ ಹೇಳಿದೆ. ಏಕೆಂದರೆ ದೆಹಲಿಯಲ್ಲಿ ಅರ್ಹ ಜನಸಂಖ್ಯೆಯ ಶೇ.13 ರಷ್ಟು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶೇ.7 ರಷ್ಟು ಜನರು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ
ಶಾಲೆಗಳನ್ನು ಇಡೀ ರಾತ್ರಿ ತೆರೆಯಲು ಸಾಧ್ಯವಿಲ್ಲ, ಎಲ್ಲಾ ಹಂತಗಳಲ್ಲಿ, ಸ್ಥಳೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಯೋಜನೆ ರೂಪಿಸಬೇಕಾಗಿದೆ. ಮುಂದಿನ ಹೆಜ್ಜೆಯಾಗಿ, ನಿಮ್ಮ ರಾಜ್ಯಗಳಲ್ಲಿ ಶಾಲೆಗಳನ್ನು ಭಾಗಶ: ಅಥವಾ ಸಂಪೂರ್ಣವಾಗಿ ಪುನರಾರಂಭಿಸಲು ತುರ್ತು ಆಧಾರಿತ ಯೋಜನೆ ಕುರಿತು ಸಂಬಂಧಿತ ತಜ್ಞರೊಂದಿಗೆ ಕಾರ್ಯಪಡೆಯನ್ನು ರಚನೆಯನ್ನು ಪರಿಗಣಿಸಬೇಕು ಎಂದು ತಜ್ಞರು ಪತ್ರದಲ್ಲಿ ಒತ್ತಾಯಿಸಿದ್ದಾರೆ.