ಡಿ ಆರ್‌ ಡಿ ಓ ಕೊರೊನಾ ನಿರೋಧಕ ಔಷಧಿ ಬಳಕೆಗೆ ಕೇಂದ್ರದ ಮಾರ್ಗಸೂಚಿ

ಕೊರೊನಾ ವೈರಸ್ ತಡೆಗಟ್ಟಲು ಡಿ ಆರ್‌ ಡಿ ಓ ಅಭಿವೃದ್ಧಿಪಡಿಸಿರುವ 2-ಡಿಜಿ (2 ಡಿಆಕ್ಸಿ-ಡಿ ಗ್ಲೂಕೋಸ್) ಔಷಧಿ ಬಳಸುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
2-ಡಿಜಿ
2-ಡಿಜಿ

ನವದೆಹಲಿ: ಕೊರೊನಾ ವೈರಸ್ ತಡೆಗಟ್ಟಲು ಡಿ ಆರ್‌ ಡಿ ಓ ಅಭಿವೃದ್ಧಿಪಡಿಸಿರುವ 2-ಡಿಜಿ (2 ಡಿಆಕ್ಸಿ-ಡಿ ಗ್ಲೂಕೋಸ್) ಔಷಧಿ ಬಳಸುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ತುರ್ತು ಬಳಕೆಗಾಗಿ ಈ ಔಷಧಿಗೆ ಅನುಮತಿಸಲಾಗಿದೆ. ಮಧ್ಯಮದಿಂದ ತೀವ್ರ ರೀತಿಯ ರೋಗಲಕ್ಷಣ ಹೊಂದಿರುವ ಪ್ರಕರಣಗಳ ಸಂದರ್ಭಗಳಲ್ಲಿ ಮಾತ್ರ ಬಳಕೆಗೆ ಸೂಚಿಸಲಾಗಿದೆ. 

ಕೊರೊನಾ ಪಾಸಿಟಿವ್‌ ದೃಢಪಟ್ಟವರಿಗೆ ತಕ್ಷಣದಿಂದ ಗರಿಷ್ಠ 10 ದಿನಗಳವರೆಗೆ ಈ ಔಷಧಿ ನೀಡಬಹುದು.
ಆದರೆ, ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯರ ಸೂಚನೆಯಂತೆ ಔಷಧಿ ಬಳಸಬೇಕು ಎಂದು ಅದು ಸ್ಪಷ್ಟಪಡಿಸಿದೆ. ಅನಿಯಂತ್ರಿತ ಮಧುಮೇಹ, ತೀವ್ರ ಹೃದಯ ಕಾಯಿಲೆ, ಉಸಿರಾಟ ಅಥವಾ ಯಕೃತ್ತು, ಮೂತ್ರಪಿಂಡ ಸಮಸ್ಯೆ ಹೊಂದಿದವರ ಮೇಲೆ ಔಷಧಿಯನ್ನು ಪರೀಕ್ಷಿಸಲಾಗಿಲ್ಲ, ಅಂತಹವರಿಗೆ ಇದನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ ಎಂದು ಸೂಚಿಸಿದೆ.

ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 2-ಡಿಜಿ ಔಷಧಿಯನ್ನು ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ರೋಗಿಗಳು, ಅವರ ಸಂಬಂಧಿಕರು ಈ ಔಷಧಿಗಾಗಿ ಆಸ್ಪತ್ರೆಯ ಮುಖ್ಯಸ್ಥರು, ಡಾ. ರೆಡ್ಡಿಸ್ ಲ್ಯಾಬ್ ಅನ್ನು ಸಂಪರ್ಕಿಸಬಹುದು. 2dg@drreddys.com ಗೆ ಮೇಲ್ ಮೂಲಕ ಔಷಧಿಯ ಸರಬರಾಜುಗಳಿಗೆ ವಿನಂತಿಸಬಹುದು. 

ಡಾ|| ರೆಡ್ಡೀಸ್‌ ಲ್ಯಾಬ್‌ ಡಿಆರ್‌ಡಿಒ ವಿನ್ಯಾಸಗೊಳಿಸಿದ ಪ್ರತಿ 2 ಡಿಜಿ ಸ್ಯಾಚೆಟ್‌ಗೆ 990 ರೂ ದರ ನಿಗದಿಪಡಿಸಿದೆ. ಚಿಕಿತ್ಸೆಗೆ ತಲಾ ಒಬ್ಬೊಬ್ಬರಿಗೆ ಐದರಿಂದ ಹತ್ತು ಸ್ಯಾಚೆಟ್‌ಗಳು ಬೇಕಾಗುತ್ತವೆ. ಚಿಕಿತ್ಸೆಯ ವೆಚ್ಚ ಪ್ರತಿ ವ್ಯಕ್ತಿಗೆ 5,000 ರಿಂದ 10,000 ರೂ ತಗುಲಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com