ದೆಹಲಿಯಲ್ಲಿ 944 ಬ್ಲ್ಯಾಕ್ ಫಂಗಸ್ ಪ್ರಕರಣ, 59 ಸಾವು, 41 ಮಂದಿ ಗುಣಮುಖ: ಮುಖ್ಯಮಂತ್ರಿ ಕೇಜ್ರಿವಾಲ್
ದೆಹಲಿಯಲ್ಲಿ 944 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು, 59 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
Published: 01st June 2021 08:04 AM | Last Updated: 01st June 2021 12:48 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿಯಲ್ಲಿ 944 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು, 59 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ 944 ಕಪ್ಪು ಶಿಲೀಂಧ್ರ ಪ್ರಕರಣಗಳು ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 650 ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ 300 ಪ್ರಕರಣಗಳಿವೆ. ಇನ್ನು ದೆಹಲಿಯಲ್ಲಿ ಈವರೆಗೂ 41 ಮಂದಿ ಬ್ಲಾಕ್ ಫಂಗಸ್ ಸೋಂಕಿತರು ಗುಣಮುಖರಾಗಿದ್ದಾರೆ. 748 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಪ್ಪು ಶಿಲೀಂಧ್ರ ಚಿಕಿತ್ಸೆಯಲ್ಲಿ ಬಳಸುವ ಔಷಧದ ಕೊರತೆ ಇದ್ದು, ಆದಾಗ್ಯೂ, ಚುಚ್ಚುಮದ್ದಿನ ಪೂರೈಕೆ ಕಡಿಮೆ. ಈಗಾಗಲೆ ಒಂದು ಸಾವಿರ ಚುಚ್ಚುಮದ್ದು ಪೂರೈಕೆಯಾಗಿದೆ. ಓರ್ವ ಸೋಂಕಿತನಿಗೆ ಚಿಕಿತ್ಸೆ ಪರಿಣಾಮಕಾರಿಯಾಗಿರಲು ದಿನಕ್ಕೆ 3 ರಿಂದ ನಾಲ್ಕು ಇಂಜೆಕ್ಷನ್ ಗಳು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೆಹಲಿಗೆ ಕೇವಲ 4,670 ಬಾಟಲುಗಳು ಬಂದಿದ್ದು, ವೈದ್ಯರ ಪ್ರಕಾರ, ಪ್ರತಿ ರೋಗಿಗೆ ವಾರಕ್ಕೆ ಸರಾಸರಿ 50 ಬಾಟಲ್ ಇಂಜೆಕ್ಷನ್ ಬೇಕಾಗುತ್ತವೆ. ನಾವು ಕೇಂದ್ರ ಸರ್ಕಾರದಿಂದ ಹಂಚಿಕೆ ಪಡೆದಾಗಲೆಲ್ಲಾ, ಪ್ರತಿ ಸೌಲಭ್ಯದಲ್ಲಿನ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ನಾವು ಅವುಗಳನ್ನು ಆಸ್ಪತ್ರೆಗಳಿಗೆ ವಿತರಿಸುತ್ತೇವೆ. ಜೀವ ಉಳಿಸುವ ಈ ಆಂಫೊಟೆರಿಸಿನ್-ಬಿ ಔಷಧಿಗೆ ಭಾರಿ ಕೊರತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.