ಬಾಬಾ ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಿ: ಗುಜರಾತ್ ವೈದ್ಯರು

ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್‌ ನ ವೈದ್ಯಕೀಯ ಸಂಘಗಳು ಅಹಮದಾಬಾದ್ ನಗರ ಪೊಲೀಸರನ್ನು ಕೋರಿದ್ದಾರೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ಅಹಮದಾಬಾದ್: ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್‌ ನ ವೈದ್ಯಕೀಯ ಸಂಘಗಳು ಅಹಮದಾಬಾದ್ ನಗರ ಪೊಲೀಸರನ್ನು ಕೋರಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮತ್ತು ಅಹಮದಾಬಾದ್ ಮೆಡಿಕಲ್ ಅಸೋಸಿಯೇಶನ್(ಎಎಂಎ) ಯ ಗುಜರಾತ್ ಘಟಕದ ಹಿರಿಯ ವೈದ್ಯರು ಮತ್ತು ಪದಾಧಿಕಾರಿಗಳು ನವರಂಗಪುರ ಪೊಲೀಸರಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದರು. ಅವಹೇಳನಕಾರಿ ಹೇಳಿಕೆ ನೀಡಿರುವ ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. 

ಅಲೋಪತಿ ಮತ್ತು ಲಸಿಕೆಗಳು ಪರಿಣಾಮಕಾರಿ ಅಲ್ಲ ಎಂದು ಹೇಳಿರುವ ರಾಮದೇವ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ವೈದ್ಯರು ಮನವಿಗಳನ್ನು ನೀಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

"ಐಎಂಎ ಮತ್ತು ಎಎಂಎ ನೀಡಿದ ಜ್ಞಾಪಕ ಪತ್ರಗಳನ್ನು ಸ್ವೀಕರಿಸಿದ್ದೇವೆ. ಆದಾಗ್ಯೂ, ವೈದ್ಯಕೀಯ ಸಂಘಗಳು ಎತ್ತಿರುವ ವಿಷಯವು ನಮ್ಮ ವ್ಯಾಪ್ತಿಗೆ ಮೀರಿದೆ ಎಂದು ವಲಯ -1ರ ಪೊಲೀಸ್ ಪೊಲೀಸ್ ಆಯುಕ್ತ ರವೀಂದ್ರ ಪಟೇಲ್ ಹೇಳಿದ್ದಾರೆ. ಅಲ್ಲದೆ ಯಾವುದೇ ಎಫ್‌ಐಆರ್ ದಾಖಲಿಸಲಾಗುವುದಿಲ್ಲ ಎಂದರು.

ಅಲೋಪತಿ ಒಂದು 'ಸ್ಟುಪಿಡ್ ಸೈನ್ಸ್' ಅಲೋಪತಿ ಔಷಧಿಗಳನ್ನು ಸೇವಿಸಿದರೂ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ" ಎಂದು ಹೇಳುವ ಮೂಲಕ ರಾಮ್‌ದೇವ್ ಜನರನ್ನು ವೈದ್ಯರ ವಿರುದ್ಧ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಐಎಂಎ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com