ಹೈಕೋರ್ಟ್ ನಲ್ಲಿ 5 ಜಿ ವಿರುದ್ಧದ ವರ್ಚ್ಯುಯಲ್ ವಿಚಾರಣೆ: ಪದೇ ಪದೇ ಜೂಹಿ ಚಾವ್ಲಾ ಸಿನಿಮಾ ಹಾಡು ಹಾಡಿದ ವ್ಯಕ್ತಿ!

ಭಾರತದಲ್ಲಿ 5ಜಿ ತಂತ್ರಜ್ಞಾನ ಜಾರಿ ವಿರೋಧಿಸಿ ದೆಹಲಿ ಹೈಕೋರ್ಟ್ ಗೆ ನಟಿ ಜೂಹಿ ಚಾವ್ಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.02 ರಂದು ವಿಚಾರಣೆಗೆ ಬಂದಿತ್ತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ 5ಜಿ ತಂತ್ರಜ್ಞಾನ ಜಾರಿ ವಿರೋಧಿಸಿ ದೆಹಲಿ ಹೈಕೋರ್ಟ್ ಗೆ ನಟಿ ಜೂಹಿ ಚಾವ್ಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.02 ರಂದು ವಿಚಾರಣೆಗೆ ಬಂದಿತ್ತು. 

ದೆಹಲಿ ಹೈಕೋರ್ಟ್ ನಡೆಸುತ್ತಿದ್ದ ವರ್ಚ್ಯುಯಲ್ ವಿಚಾರಣೆ ವೇಳೆ ವ್ಯಕ್ತಿಯೋರ್ವ ಸೆಷನ್ ಗೆ ಸೇರ್ಪಡೆಗೊಂಡು ಪದೇ ಪದೇ ಜೂಹಿ ಚಾವ್ಲಾ ನಟಿಸಿದ್ದ ಸಿನಿಮಾ ಹಾಡುಗಳನ್ನು ಹಾಡಿರುವ ವಿಲಕ್ಷಣ ಘಟನೆ ಈ ವಿಚಾರಣೆ ವೇಳೆ ವರದಿಯಾಗಿದೆ. 
 
ಬೇರೆ ಬೇರೆ ಹೆಸರುಗಳಿಂದ ಸೆಷನ್ ಗೆ ಸೇರ್ಪಡೆಯಾಗುತ್ತಿದ್ದ ಈ ವ್ಯಕ್ತಿ ಪದೇ ಪದೇ ಹಾಡು ಹಾಡುತ್ತಿದ್ದರಿಂದ ವಿಚಾರಣೆಗೆ ಅಡಚಣೆ ಉಂಟಾಗಿದ್ದು, ನಿರಂತರ ಎಚ್ಚರಿಕೆಯ ನಡುವೆಯೂ ಸೆಷನ್ ನ್ನು ಲಾಕ್ ಮಾಡುವವರೆಗೂ ಇದನ್ನೇ ಮುಂದುವರೆಸಿದ್ದಾನೆ.  
 
ವಿಚಾರಣೆ ಪ್ರಕ್ರಿಯೆಗೆ ನಟಿ ಜೂಹಿ ಚಾವ್ಲ ಸಹ ದಕ್ಷಿಣ ಆಫ್ರಿಕಾದಿಂದ ಸೇರ್ಪಡೆಗೊಂಡಿದ್ದರು. ಈ ವೇಳೆ ವ್ಯಕ್ತಿಯೋರ್ವ ಘೂಂಘಟ್ ಕೀ ಆದ್ ಮೇ ಬಿಲ್ ಬರ್ ಕಾ ದಿದಾರ್ ಅಧುರಾ ಸೇರಿದಂತೆ ಹಲವು ಹಾಡುಗಳನ್ನು ಹಾಡತೊಡಗಿದ್ದ, ಮೂರನೇ ಬಾರಿ ಈ ವ್ಯಕ್ತಿ ಆಯಿನಾ ಸಿನಿಮಾದಿಂದ "ಮೇರಿ ಬನ್ನೊ ಕಿ ಆಯೆಗಿ ಬರಾತ್ ಕೆ ಧೋಲ್ ಬಜಾವೊ ಜಿ" ಎಂಬ ಹಾಡನ್ನು ಹಾಡತೊಡಗಿದ್ದ

ಕೊನೆಗೆ ಜೂಹಿ ಮ್ಯಾಡಮ್ ಎಲ್ಲಿ ಅವರನ್ನು ನೋಡಕ್ಕೆ ಆಗುತ್ತಿಲ್ಲ ಎಂದು ಕೇಳಿದ್ದಾನೆ, ಈ ಬಳಿಕ ನ್ಯಾಯಾಧೀಶರು ಈ ವ್ಯಕ್ತಿಯನ್ನು ಮ್ಯೂಟ್ ಮಾಡಲು ಹೇಳಿದ್ದಾರೆ. ನಂತರ ಮನೀಷಾ ಕೋಯಿರಾಲ ಎಂಬ ಹೆಸರಿನಿಂದ ಮತ್ತೆ ಸೇರ್ಪಡೆಗೊಂಡು ಮತ್ತೆ ಹಾಡು ಹಾಡಲು ಯತ್ನಿಸಿದ್ದಾನೆ. 

ವಿಚಾರಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಟ್ವಿಟರ್ ನಲ್ಲಿ ಲಿಂಕ್ ಹಂಚಿಕೊಂಡಿದ್ದ ಜೂಹಿ ಚಾವ್ಲಾ " 5 ಜಿ ವಿರುದ್ಧ ಆತಂಕದ ಅಂಶಗಳಿದ್ದರೆ ಹಂಚಿಕೊಳ್ಳಿ" ಎಂದು ಸಲಹೆ ನೀಡಿದ್ದರು. ಇದನ್ನೇ ಬಳಸಿಕೊಂಡು ವ್ಯಕ್ತಿಯೋರ್ವ ಈ ವಿಲಕ್ಷಣ ಘಟನೆಗೆ ಕಾರಣನಾಗಿದ್ದ. 

ನ್ಯಾ. ಜೆಆರ್ ಮಿಧಾ ಅವರು ಪ್ರಕ್ರಿಯೆಯನ್ನು ಲಾಕ್ ಮಾಡಲು ಆದೇಶಿಸಿದ ಬಳಿಕ ಆ ವ್ಯಕ್ತಿಯನ್ನು ಹೊರಗಿಡಲಾಯಿತು. ಕೋರ್ಟ್ ವಿಚಾರಣೆ ವೇಳೆ ಅವಾಂತರ ಸೃಷ್ಟಿಸಿದ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ನ್ಯಾಯಾಲಯ ಸೂಚಿಸಿದೆ. ಈ ವೇಳೆ ಲಘು ಹಾಸ್ಯದ ಧಾಟಿಯಲ್ಲಿ ಚಾವ್ಲಾ ಅವರ ವಕೀಲರು "ಹಾಡು ಹಾಡುತ್ತಿದ್ದ ವ್ಯಕ್ತಿಗೆ ಈಗಾಗಲೇ ರೇಡಿಯೇಷನ್ ಪರಿಣಾಮ ಬೀರಿರಬಹುದು" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com