ಧ್ವನಿ ಆಧಾರಿತ ರೋಗನಿರ್ಣಯ ಪರೀಕ್ಷೆಯಿಂದ ಶೇ. 93ರಷ್ಟು ನಿಖರ ಕೋವಿಡ್ ಫಲಿತಾಂಶ: ಐಐಎಸ್ಸಿ ವಿಜ್ಞಾನಿಗಳು

ಧ್ವನಿ ಮತ್ತು ರೋಗಲಕ್ಷಣಗಳನ್ನು ಬಳಸಿಕೊಂಡು ಕೋವಿಡ್ ಅನ್ನು ಕಂಡುಹಿಡಿಯಬಹುದೇ? ಹೌದು, ಇದರಿಂದ ಶೇ. 93ರಷ್ಟು ನಿಖರ ಫಲಿತಾಂಶ ಸಿಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
ಐಐಎಸ್ ಸಿ
ಐಐಎಸ್ ಸಿ

ನವದೆಹಲಿ: ಧ್ವನಿ ಮತ್ತು ರೋಗಲಕ್ಷಣಗಳನ್ನು ಬಳಸಿಕೊಂಡು ಕೋವಿಡ್ ಅನ್ನು ಕಂಡುಹಿಡಿಯಬಹುದೇ? ಹೌದು, ಇದರಿಂದ ಶೇ. 93ರಷ್ಟು ನಿಖರ ಫಲಿತಾಂಶ ಸಿಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ. 

ಇದೇ ವೇಳೆ ಅಂತಿಮ ಅನುಮೋದನೆಗಾಗಿ ಸಂಶೋಧನಾ ಫಲಿತಾಂಶಗಳನ್ನು ಐಸಿಎಂಆರ್‌ಗೆ ಸಲ್ಲಿಸಲಾಗುತ್ತದೆ.
 ಉಸಿರಾಟ, ಕೆಮ್ಮು ಮತ್ತು ಶಬ್ದಗಳ ಆಧಾರದ ಮೇಲೆ ಕೋವಿಡ್ ಪತ್ತೆ ಹಚ್ಚುವ ರೋಗನಿರ್ಣಯ ಸಾಧನವನ್ನು ನಿರ್ಮಿಸುವ ಪ್ರಯತ್ನವಾಗಿ ಪ್ರಾಜೆಕ್ಟ್ ಕೋಸ್ವಾರವನ್ನು ಕಳೆದ ವರ್ಷ ಐಐಎಸ್ಸಿ ಪ್ರಾರಂಭಿಸಿತ್ತು. ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಉಸಿರಾಟದ ಕಾಯಿಲೆಗಳ ಅಕೌಸ್ಟಿಕ್ ಬಯೋ ಮಾರ್ಕರ್‌ಗಳನ್ನು ಗುರುತಿಸುವ ಸಂಶೋಧನಾ ನಿರ್ದೇಶನವು ಹೊಸ ಆಸಕ್ತಿಯನ್ನು ಪಡೆದುಕೊಂಡಿದೆ.

ಆರೋಗ್ಯವಂತ ವ್ಯಕ್ತಿಗಳ ಉಸಿರಾಟದ ಧ್ವನಿ ಕೋವಿಡ್ ರೋಗಿಗಳಿಗಿಂತ ಹೇಗೆ ಭಿನ್ನವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಂಡವೊಂದು ಅಧ್ಯಯನ ನಡೆಸಿತು. ಇದಕ್ಕಾಗಿ 15ರಿಂದ 80 ವರ್ಷದೊಳಗಿನ ಸುಮಾರು 1,699 ಮಂದಿಯನ್ನು ಪರೀಕ್ಷಿಸಲಾಗಿದೆ. ಅಲ್ಲದೆ ಕೊರೋನಾಗೆ ತುತ್ತಾಗಿದ್ದ 157 ಮಂದಿಯ  ಧ್ವನಿ ಮತ್ತು ರೋಗಲಕ್ಷಣದ ಮಾದರಿಗಳನ್ನು ಸಂಗ್ರಹಿಸಲಾಗಿದೆ. 

ಇದಕ್ಕಾಗಿ ಕ್ರೌಡ್-ಸೋರ್ಸ್ಡ್ ಮಲ್ಟಿ-ಮೋಡಲ್ ಡೇಟಾವನ್ನು ಬಳಸಿಕೊಂಡು ನಾವು ಕೋವಿಡ್ ಡಯಾಗ್ನೋಸ್ಟಿಕ್‌ಗೆ ಒಂದು ವಿಧಾನವನ್ನು ವಿನ್ಯಾಸಗೊಳಿಸುತ್ತೇವೆ. ರೋಗಲಕ್ಷಣಗಳ ಡೇಟಾದೊಂದಿಗೆ ಕೆಮ್ಮು, ಉಸಿರಾಟ ಮತ್ತು ಮಾತನಾಡುವ ಶಬ್ಧಗಳಂತಹ ಅಕೌಸ್ಟಿಕ್ ಸಿಗ್ನಲ್‌ಗಳನ್ನು ಒಳಗೊಂಡ ದತ್ತಾಂಶವನ್ನು ಹತ್ತು ತಿಂಗಳ ಅವಧಿಯಲ್ಲಿ ವೆಬ್-ಅಪ್ಲಿಕೇಶನ್ ಬಳಸಿ ದಾಖಲಿಸಲಾಗುತ್ತದೆ. 

ಅಧ್ಯಯನವು ಪರಿಶೀಲನೆಯಲ್ಲಿದೆ. ಧ್ವನಿ ಆಧಾರಿತ ರೋಗನಿರ್ಣಯ ಟೆಸ್ಟ್ ನಲ್ಲಿ ಶೇಕಡ 93% ನಿಖರ ಕೊರೋನಾ ಫಲಿತಾಂಶ ಸಿಗುತ್ತದೆ. ಇದರ ವಾಣಿಜ್ಯ ಬಳಕೆಗಾಗಿ ಅಂತಿಮ ಅನುಮೋದನೆಗಾಗಿ ಐಸಿಎಂಆರ್ ಅನ್ನು ಸಂಪರ್ಕಿಸಲು ಸಿದ್ಧರಾಗಿದ್ದಾರೆ ಎಂದು ಐಇಇಇ ಜರ್ನಲ್ ಆಫ್ ಬಯೋಮೆಡಿಕಲ್ ಅಂಡ್ ಹೆಲ್ತ್ ಇನ್ಫಾರ್ಮ್ಯಾಟಿಕ್ಸ್. ಐಐಎಸ್‌ಸಿಯ ಸಹಾಯಕ ಪ್ರಾಧ್ಯಾಪಕ ಶ್ರೀರಾಮ್ ಗಣಪತಿ ಹೇಳಿದ್ದಾರೆ. 

ಈ ಅಧ್ಯಯನದಲ್ಲಿ ಬಳಸಲಾದ ಡೇಟಾವು ವೆಬ್ ಆಧಾರಿತ ಕ್ರೌಡ್-ಸೋರ್ಸ್ಡ್ ಡೇಟಾ ಸಂಗ್ರಹಣಾ ವೇದಿಕೆಯಿಂದ ಬಂದಿದೆ. ಪ್ರತಿ ಭಾಗವಹಿಸುವವರು 9 ಆಡಿಯೊ ರೆಕಾರ್ಡಿಂಗ್‌ಗಳನ್ನು ನೀಡುತ್ತಾರೆ. ಆಳವಿಲ್ಲದ ಮತ್ತು ಆಳವಾದ ಉಸಿರಾಟ, ಆಳವಿಲ್ಲದ ಮತ್ತು ಭಾರವಾದ ಕೆಮ್ಮು, ಮೂರು ಸ್ವರಗಳ ನಿರಂತರ ಧ್ವನಿಮುದ್ರಣ. ವೇಗದ-ಸಾಮಾನ್ಯ ವೇಗ 1ರಿಂದ 20 ಸಂಖ್ಯೆಯ ಎಣಿಕೆ. ಇದರ ಜೊತೆಯಲ್ಲಿ, ಪ್ರತಿಯೊಬ್ಬ ಭಾಗವಹಿಸುವವರು ಪ್ರಸ್ತುತ ಆರೋಗ್ಯ ಸ್ಥಿತಿ(ಕೋವಿಡ್ ಸೋಂಕು, ಲಕ್ಷಣಗಳು ಮತ್ತು ಸಹ-ಅಸ್ವಸ್ಥತೆ, ಯಾವುದಾದರೂ ಇದ್ದರೆ), ಲಿಂಗ, ವಯಸ್ಸು ಮತ್ತು ವಿಶಾಲ ಭೌಗೋಳಿಕ ಸ್ಥಳವನ್ನು ಸಹ ದಾಖಲಿಸುತ್ತಾರೆ.

ವೈಯಕ್ತಿಕವಾಗಿ ಗುರುತಿಸಬಹುದಾದ ಯಾವುದೇ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ. ಕೋವಿಡ್ ಡಯಾಗ್ನೋಸ್ಟಿಕ್ ಪರೀಕ್ಷೆಗಳಲ್ಲಿನ ಡಬ್ಲ್ಯುಎಚ್‌ಒ ನೀಲನಕ್ಷೆ ಪಿಒಸಿಟಿಗಳನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯವನ್ನು ತೋರಿಸುತ್ತದೆ. ರೋಗಿಯ ಪರೀಕ್ಷೆಯನ್ನು ರೋಗಿಯ ಸ್ಥಳದಲ್ಲಿ ಅಥವಾ ಹತ್ತಿರ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com