12ನೇ ತರಗತಿ ಪರೀಕ್ಷೆ ರದ್ದು ಮಾಡಿದ್ದು ಸಂತೋಷ; ಅಂಕಗಳ ಮೌಲ್ಯಮಾಪನಕ್ಕೆ ವಸ್ತುನಿಷ್ಠ ಮಾನದಂಡ ಸಿದ್ದಪಡಿಸಿ: ಸುಪ್ರೀಂ ಕೋರ್ಟ್

ಕೋವಿಡ್ ಎರಡನೇ ಅಲೆಯ ಸಾವು-ನೋವು ಸಂಕಷ್ಟದ ನಡುವೆ 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಸುಪ್ರೀಂ ಕೋರ್ಟ್, ಇನ್ನೆರಡು ವಾರಗಳಲ್ಲಿ ವಿದ್ಯಾರ್ಥಿಗಳ ಅಂಕಗಳ ಮೌಲ್ಯಮಾಪನಕ್ಕಾಗಿ ವಸ್ತುನಿಷ್ಠ ಮಾನದಂಡಗಳನ್ನು ನೀಡಲು ಸಿಬಿಎಸ್‌ಇ ಮತ್ತು ಸಿಐಸಿಎಸ್‌ಇಗೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್ ಎರಡನೇ ಅಲೆಯ ಸಾವು-ನೋವು ಸಂಕಷ್ಟದ ನಡುವೆ 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಸುಪ್ರೀಂ ಕೋರ್ಟ್, ಇನ್ನೆರಡು ವಾರಗಳಲ್ಲಿ ವಿದ್ಯಾರ್ಥಿಗಳ ಅಂಕಗಳ ಮೌಲ್ಯಮಾಪನಕ್ಕಾಗಿ ವಸ್ತುನಿಷ್ಠ ಮಾನದಂಡಗಳನ್ನು ನೀಡಲು ಸಿಬಿಎಸ್‌ಇ ಮತ್ತು ಸಿಐಸಿಎಸ್‌ಇಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ ಇಂದು ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಅಡ್ವೊಕೇಟ್ ಜೆ ಕೆ ದಾಸ್ ಅವರಿಗೆ ಇನ್ನೆರಡು ವಾರಗಳಲ್ಲಿ ಪರೀಕ್ಷೆಗೆ ಬದಲಾಗಿ ವಿದ್ಯಾರ್ಥಿಗಳಿಗೆ ಯಾವ ರೀತಿ ಮೌಲ್ಯಮಾಪನ ಮಾಡಲಾಗುತ್ತದೆ ಎಂಬುದನ್ನು ವಸ್ತುನಿಷ್ಠವಾಗಿ ತಿಳಿಸುವಂತೆ ಸೂಚಿಸಿತು.

12ನೇ ತರಗತಿ ಪರೀಕ್ಷೆಯನ್ನು ಈ ಪರಿಸ್ಥಿತಿಯಲ್ಲಿ ರದ್ದುಪಡಿಸಿದ್ದು ಒಳ್ಳೆಯದಾಯಿತು, ಆದರೆ ಪರೀಕ್ಷೆಗೆ ಬದಲಾಗಿ ವಿದ್ಯಾರ್ಥಿಗಳಿಗೆ ಅಂಕ ನೀಡಲು ಮೌಲ್ಯಮಾಪನ ಮಾಡಲು ಯಾವ ರೀತಿಯ ವಸ್ತುನಿಷ್ಠ ಮಾನದಂಡ ನಿಗದಿಪಡಿಸುತ್ತೀರಿ ಎಂಬುದನ್ನು ಇನ್ನೆರಡು ವಾರಗಳಲ್ಲಿ ನಮಗೆ ತಿಳಿಸಿ ಎಂದು ನ್ಯಾಯಮೂರ್ತಿಗಳು ಆದೇಶ ನೀಡಿದರು.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿ ಮುಂದಿನ ಕೋರ್ಸ್ ಗಳಿಗೆ ಪ್ರವೇಶ ಪಡೆಯಬೇಕಿರುವುದರಿಂದ ಅವರಿಗೆ ವಸ್ತುನಿಷ್ಠ ಅರ್ಹತಾ ಅಂಕಗಳನ್ನು ನೀಡಲು ಹೆಚ್ಚು ಸಮಯಾವಕಾಶ ನೀಡಲು ಸಾಧ್ಯವಿಲ್ಲ, ಆದಷ್ಟು ಶೀಘ್ರವೇ ಸರ್ಕಾರ ಈ ಕುರಿತು ನಿರ್ಧಾರಕ್ಕೆ ಬರಬೇಕು ಎಂದು ನ್ಯಾಯಪೀಠ ಸ್ಪಷ್ಟವಾಗಿ ಆದೇಶ ನೀಡಿತು.

ವಸ್ತುನಿಷ್ಠ ಮೌಲ್ಯಮಾಪನಗಳ ಆಧಾರವನ್ನು ವಿದ್ಯಾರ್ಥಿಗಳ ಅಂಕ ನೀಡಿಕೆಗೆ ಬಳಸಲು ಶಿಫಾರಸು ಮಾಡುತ್ತಿದ್ದು, ಹೀಗೆ ಮಾಡುವುದರಿಂದ ಯಾರಿಗಾದರೂ ಆಕ್ಷೇಪಗಳಿದ್ದರೆ ಧ್ವನಿಯೆತ್ತಬಹುದು. ಮಂಡಳಿಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಕೋರಿರುವ ಪರಿಹಾರದಂತೆಯೂ ಬದಲಿ ಮೌಲ್ಯಮಾಪನ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ಸರ್ಕಾರ ಕಳೆದ ಮಂಗಳವಾರ ನಿರ್ಧರಿಸಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕವನ್ನು ದೂರ ಮಾಡಬೇಕೆಂಬುದೇ ಸರ್ಕಾರದ ಆಶಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com