'ಬಳಕೆದಾರರ ಖಾಸಗಿತನ' ಎಂದಿಗೂ ನಮ್ಮ ಮೊದಲ ಆದ್ಯತೆ: ಕೇಂದ್ರದ ಆರೋಪಕ್ಕೆ ವಾಟ್ಸಾಪ್ ಪ್ರತಿಕ್ರಿಯೆ!

ಹೊಸ ಖಾಸಗಿತನ ನೀತಿಗಾಗಿ ತನ್ನ ಬಳಕೆದಾರರಿಂದ ಬಲವಂತದಿಂದ ಒಪ್ಪಿಗೆ ಪಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಆರೋಪಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಮೇಸೆಂಜಿಂಗ್ ಆಪ್ ವಾಟ್ಸಾಪ್, ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆಗೆ ಬದ್ಧವಾಗಿರುವುದಾಗಿ ಹೇಳಿದೆ.
ವಾಟ್ಸಾಪ್
ವಾಟ್ಸಾಪ್

ನವದೆಹಲಿ: ಹೊಸ ಖಾಸಗಿತನ ನೀತಿಗಾಗಿ ತನ್ನ ಬಳಕೆದಾರರಿಂದ ಬಲವಂತದಿಂದ ಒಪ್ಪಿಗೆ ಪಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಆರೋಪಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಮೇಸೆಂಜಿಂಗ್ ಆಪ್ ವಾಟ್ಸಾಪ್, ಬಳಕೆದಾರರ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆಗೆ ಬದ್ಧವಾಗಿರುವುದಾಗಿ ಹೇಳಿದೆ.

ಮೆಸೇಜಿಂಗ್ ಆ್ಯಪ್ ನ ಪರಿಷ್ಕೃತ ಖಾಸಗಿತನ ನೀತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಂದೂಡಿದ ಕೂಡಲೇ ಹೇಳಿಕೆ ನೀಡಿರುವ ವಾಟ್ಸಾಪ್ ವಕ್ತಾರ, ನಾವು ಈಗಾಗಲೇ ಭಾರತ ಸರ್ಕಾರಕ್ಕೆ ಪ್ರತಿಕ್ರಿಯಿಸಿದ್ದು, ಬಳಕೆದಾರರ ಖಾಸಗಿತನಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಬೆನ್ನಲ್ಲೇ, ವಾಟ್ಸಾಪ್ ಈ ರೀತಿಯ ಹೇಳಿಕೆ ನೀಡಿದೆ. ತನ್ನ ಹೊಸ ಖಾಸಗಿತನ ನೀತಿಗಾಗಿ ವಾಟ್ಸಾಪ್ ತನ್ನ ಬಳಕೆದಾರರಿಗೆ ಬಲವಂತದಿಂದ ಒಪ್ಪಿಗೆ ಪಡೆಯುವ ತಂತ್ರ ಅನುಸರಿಸುತ್ತಿದೆ ಎಂದು ಸರ್ಕಾರ ಆರೋಪಿಸಿತ್ತು.

ಮುಂಬರುವ ವಾರಗಳಲ್ಲಿ ವಾಟ್ಸಾಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಾರ್ಯವಿಧಾನವನ್ನು ಮಿತಿಗೊಳಿಸುವುದಿಲ್ಲ, ಬದಲಿಗೆ, ನವೀಕರಣದ ಬಗ್ಗೆ ಕಾಲಕಾಲಕ್ಕೆ ಬಳಕೆದಾರರಿಗೆ ಮನದಟ್ಟು ಮಾಡುವುದನ್ನು ಮುಂದುವರೆಸುತ್ತೇವೆ ಎಂದು ವಕ್ತಾರರು ಹೇಳಿದ್ದಾರೆ.

ಮುಂಬರುವ ವೈಯಕ್ತಿಕ ಡೇಟಾ ಸಂರಕ್ಷಣೆ (ಪಿಡಿಪಿ) ಕಾನೂನು ಜಾರಿಗೆ ಬರುವವರೆಗೆ ಮೆಸೇಜಿಂಗ್ ಅಪ್ಲಿಕೇಶನ್ ಈ ವಿಧಾನವನ್ನು ನಿರ್ವಹಿಸುತ್ತದೆ.ಈ ವಿಧಾನವು ಎಲ್ಲಾ ಬಳಕೆದಾರರು ವ್ಯವಹಾರದೊಂದಿಗೆ ಸಂವಹನ ನಡೆಸಲು ಬಯಸುತ್ತೀರೋ ಇಲ್ಲವೋ ಎಂಬ ಆಯ್ಕೆಯನ್ನು ಬಲಪಡಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅದು ಹೇಳಿದೆ.

ಹೊಸ ನೀತಿಯನ್ನು ಅನುಸರಿಸುವಂತೆ ಯಾರನ್ನೂ ಬಲವಂತಪಡಿಸಿಲ್ಲ, ಇದು ಖಾಸಗಿತನ ನೀತಿಯಾಗಿದ್ದು ಕಡ್ಡಾಯವೇನಿಲ್ಲ, 2021ರ ಹೊಸ ನೀತಿ ಖಾಸಗಿ ಪಕ್ಷಗಳ ನಡುವಿನ ಒಪ್ಪಂದವಾಗಿದ್ದು, ಬಳಕೆದಾರರು ಸ್ವೀಕರಿಸಲು ಅಥವಾ ತಿರಸ್ಕರಿಸಲು ಮುಕ್ತರಾಗಿದ್ದಾರೆ ಎಂದು ವಾಟ್ಸಾಪ್ ಹೇಳಿದೆ.

ಹೊಸ ಖಾಸಗಿತನ ನೀತಿಗಾಗಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸುವಂತೆ ವಾಟ್ಸಾಪ್ ದೆಹಲಿ ಹೈಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ. ಸಂಬಂಧಿತ ನ್ಯಾಯಪೀಠ ಇಂದು ಸೇರಲಿಲ್ಲ, ಮುಂದಿನ ವಿಚಾರಣೆ ಜುಲೈ 22ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com