ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಅನುಮತಿ ಕೋರಿದ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ

ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆ ಅನುಮತಿ ಕೋರಿ ಗುರುವಾರ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ.
ಸ್ಪುಟ್ನಿಕ್ ವಿ ಲಸಿಕೆ ಮತ್ತು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ
ಸ್ಪುಟ್ನಿಕ್ ವಿ ಲಸಿಕೆ ಮತ್ತು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ

ನವದೆಹಲಿ: ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆ ಅನುಮತಿ ಕೋರಿ ಗುರುವಾರ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ.

ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆ ಇದೀಗ  ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ತಯಾರಿಕೆ ಸಂಬಂಧ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ (ಡಿಸಿಜಿಐ) ಮನವಿ ಸಲ್ಲಿಕೆ ಮಾಡಿದೆ. ಲಸಿಕೆಯ ತಯಾರಿಕೆ  ಮಾತ್ರವಲ್ಲದೇ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಪರೀಕ್ಷಾ ಪರವಾನಗಿಯನ್ನು ಸಹ ಕೋರಿದೆ ಎಂದು ತಿಳಿದುಬಂದಿದೆ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಡಾ. ರೆಡ್ಡಿ ಅವರ ಪ್ರಯೋಗಾಲಯಗಳು ತಯಾರಿಸುತ್ತಿವೆ.

ಇನ್ನು ಜೂನ್‌ನಲ್ಲಿ 10 ಕೋಟಿ ಕೋವಿಶೀಲ್ಡ್ ಡೋಸ್‌ಗಳನ್ನು ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ಎಸ್‌ಐಐ ಈಗಾಗಲೇ ಸರ್ಕಾರಕ್ಕೆ ತಿಳಿಸಿದೆ. ಕೋವಿಶೀಲ್ಡ್ ಜೊತೆಗೇ ಇನ್ನೂ ಮೂರು ಲಸಿಕೆಗಳನ್ನು ತಯಾರಿಸುವ ಕುರಿತು ಎಸ್ ಐಐ ಕಾರ್ಯನಿರತವಾಗಿದ್ದು, ಈಗಾಗಲೇ ಸೆರಂ  ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಸಂಸ್ಥೆಗಳ ಕೋವಿಡ್ ಲಸಿಕೆ, ಕೋವಿಶೀಲ್ಡ್ ಅನ್ನು ಉತ್ಪಾದನೆ ಮಾಡುತ್ತಿದ್ದು, ಇದಲ್ಲದೆ ಇನ್ನೂ ಮೂರು ಹೊಸ ಕೋವಿಡ್ ಲಸಿಕೆಗಳ ಪ್ರಯೋಗಗಳಲ್ಲಿ ತೊಡಗಿದೆ. 

ನೋವೋವ್ಯಾಕ್ಸ್ ಸಂಸ್ಥೆ ಲಸಿಕೆಯ ಪ್ರಯೋಗ ಮುಂದಿನ ಹಂತಕ್ಕೆ ಸಾಗಿದ್ದು, ಕೊಡಾಜೆನಿಕ್ಸ್ ಸಂಸ್ಥೆಯ ಸಿಂಗಲ್ ಡೋಸ್ ಲಸಿಕೆ ಕೂಡ ಬ್ರಿಟನ್ ನಲ್ಲಿ 1/2 ಪ್ರಯೋಗದಲ್ಲಿ ತೊಡಗಿದೆ. ಇನ್ನೂ ಮೂರನೇ ಲಸಿಕೆಯನ್ನು ಸ್ಪೈ ಬಯೋಟೆಕ್ ಸಂಸ್ಥೆ ಸಂಶೋಧಿಸಿದ್ದು, ಇದೂ ಕೂಡ ಸಂಶೋಧನಾ ಹಂತದಲ್ಲಿದೆ ಎಂದು  ತಿಳಿದುಬಂದಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com